ಪೆರಡಾಲ: ಪೆರಡಾಲ ಶ್ರೀ ಉದ ನೇಶ್ವರ ದೇವಸ್ಥಾನದ ಆವರಣದಲ್ಲಿ ‘ಶ್ರೀ ಉದನೇಶ್ವರ ಹಸಿರು ನಮ ನೋತ್ಸವ’ ಎಂಬ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನದ ಆಡಳಿತ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಡ್ವ. ವೆಂಕಟ್ರಮಣ ಭಟ್ ಚಂಬಲ್ತಿಮಾರು ಮಾತನಾಡಿ, ದೇವರ ಸೇವೆ ಜೊತೆಗೆ ಪ್ರಕೃತಿ ಸೇವೆ ಮಾಡುವುದು ನಮ್ಮ ಕರ್ತವ್ಯ. ಈ ಹಸಿರು ನಮನೋತ್ಸವ ವನ್ನು ಪ್ರತಿ ವರ್ಷ ಆಚರಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಕರೆ ನೀಡಿದರು. ಬ್ರಹ್ಮ ಕಲಶೋ ತ್ಸವ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ ಗುತ್ತು, ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂ ಜನ್ ರೈ ಪೆರಡಾಲ, ಮೊಕ್ತೇಸರ ಸೀತಾರಾಮ ನವಕಾನ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲ ಗುತ್ತು, ಬ್ರಹ್ಮಕಲಶೋತ್ಸವ ಉಪಾಧ್ಯಕ್ಷ ಜಯಪ್ರಕಾಶ ಶೆಟ್ಟಿ ಕಡಾರು ಬೀಡು, ಜತೆ ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಶ್ರೀಶ ಕುಮಾರ್ ಪಂಜಿತ್ತಡ್ಕ, ಸದಾಶಿವ ಪೆರಡಾಲ, ಪುಟ್ಟ ನಾಯ್ಕ, ಮಾತೃ ಸಮಿತಿ ಅಧ್ಯಕ್ಷೆ ,ವಿನಯ ಜೆ. ರೈ, ಭಕ್ತರು, ಸಂಘ ಸಂಸ್ಥೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ದೇವರಿಗೆ ಪ್ರಿಯವಾದ ಬಿಲ್ವ, ರುದ್ರಾಕ್ಷಿ, ಶಮಿ, ಪಾಲಾಶ, ಅಶೋಕ, ಹಲಸು, ಮಾವು, ತೆಂಗು, ದೀವಿಹಲಸು, ಚಿಕ್ಕು, ಪೇರಳೆ, ಅಬ್ಳುಕ, ದಂತಪಾಲ, ಮಹಾಗನಿ ಮುಂತಾದ ವಿವಿಧ ಜಾತಿಯ ವೃಕ್ಷ ಸಸಿಗಳನ್ನು ಸಮರ್ಪಣೆ ಮಾಡಲಾಯಿತು. ದೇವಸ್ಥಾನದ ಆವರಣದಲ್ಲಿ ಸಮಿತಿಯ ಪದಾಧಿಕಾರಿಗಳು, ಊರಿನ ಹಿರಿಯರು, ಮಹಿಳೆಯರು ಹಾಗೂ ಯುವಕರು ಸೇರಿ ಸಾಮೂಹಿಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.







