ಸುಲೋಚನ  ನಿಧನ

ಪಾವೂರು: ಮುಡಿಮಾರು ಕಾಂಜರ ಮನೆತನದ ದಿ| ಶೇಷಪ್ಪ ಪೂಜಾರಿಯವರ ಪತ್ನಿ ಸುಲೋಚನ (62) ನಿಧನ ಹೊಂದಿದರು. ಮೃತರು ಮಕ್ಕಳಾದ ಹರೀಶ್, ಬಬಿತ, ಅಮಿತ, ಅಳಿಯಂದಿರಾದ ದಿನೇಶ್ ಕೋಡಿಕಲ್, ದಿನೇಶ್ ಕಾವೂರು, ಸಹೋದರ ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ನಿಧನಕ್ಕೆ ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣ ಶಿವಕೃಪ, ಮುಡಿಮಾರು ಶ್ರೀ ಮಲರಾಯ ದೈವಸ್ಥಾನದ ಅರ್ಚಕ ಚಂದ್ರಹಾಸ ಪೂಜಾರಿ, ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ವರ್ಕಾಡಿ ಪಂ. ಸದಸ್ಯ ಅಬೂಬಕ್ಕರ್ ಸಿದ್ದಿಕ್ ಪಾವೂರು, ವರ್ಕಾಡಿ ಕೊಂಡೆವೂರು ಕ್ಷೇತ್ರದ ಮೊಕ್ತೇಸರ ಪದ್ಮನಾಭ ಅಡ್ಯಂತಾಯ ಕಾಪು, ರವಿ ಮುಡಿಮಾರು ಸಂತಾಪ ವ್ಯಕ್ತಪಡಿಸಿದ್ದಾರೆ.

RELATED NEWS

You cannot copy contents of this page