ಕಾಸರಗೋಡು: ರಾಜ್ಯ ಸರಕಾರ ಸರಕಾರಿ ನೌಕರರಿಗೆ ವಿಸ್ಮಯ ಉಂಟುಮಾಡಲಿದೆ ಎಂದು ಆಸೆ ಹೊಂದಿದ್ದವರಿಗೆ ರಾಜ್ಯ ಬಜೆಟ್ ನಿರಾಶೆ ಉಂಟುಮಾಡಿದೆ ಎಂದು ಎನ್‌ಜಿಒ ಸಂಘ್ ಆರೋಪಿಸಿದೆ. ಹಣಕಾಸು ಸಚಿವ ಹಾಗೂ ಮುಖ್ಯಮಂತ್ರಿಯಾಗಿ ರುವ ವಿ.ಡಿ. ಸತೀಶನ್‌ರ ಬಜೆಟ್ ಘೋಷಣೆ ಕೇಳಿ ಸರಕಾರಿ ನೌಕರರು ನಿರಾಸೆ ಹೊಂದಿದ್ದಾರೆ. ಎಡರಂಗ ಸರಕಾರ ತಡೆಹಿಡಿದಿದ್ದ ನೌಕರರ ಸೌಲಭ್ಯಗಳು ಹಾಗೂ ಹಕ್ಕುಗಳನ್ನು ಘೋಷಿಸಬಹುದೆಂದು ನೌಕರರು ಆಶಾಭಾವನೆ ಹೊಂದಿದ್ದರು. ಆದರೆ ಅದು ಸಫಲವಾಗಲಿಲ್ಲ. ಎಡ ಕಾಲಿನಲ್ಲಿದ್ದ ರೋಗ ಬಲ ಕಾಲಿಗೆ ಬಂತು ಎಂಬ ಸ್ಥಿತಿಯಲ್ಲಿ ಈಗ ನೌಕರರಿದ್ದಾರೆ ಎಂದು ಎನ್‌ಜಿಒ ಸಂಘ್ ದೂರಿದೆ.
ವಿದ್ಯಾನಗರ ಸಿವಿಲ್ ಸ್ಟೇಷನ್ ಪರಿಸರದಲ್ಲಿ ಸಂಘ್ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಎನ್‌ಜಿಒ ಸಂಘ್ ರಾಜ್ಯ ಎಕ್ಸಿಕ್ಯೂ ಟಿವ್ ಸದಸ್ಯ ಪೀತಾಂಭರನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ರಂಜಿತ್ ಕೆ., ಜಿಲ್ಲಾ ಕಾರ್ಯದರ್ಶಿ ಸಂತೋಷ್ ವಿ.ಕೆ, ರವಿ ಕುಮಾರ್ ಕೊಟ್ಟೋಡಿ, ಅಭಿಜಿತ್, ಸತೀಶನ್ ನೇತೃತ್ವ ನೀಡಿದರು.






