ಕುಂಬಳೆಯಲ್ಲಿ ಕಾಡು ಬೆಳೆಯುತ್ತಿರುವ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಜ್ ಯೋಜನೆ

ಕುಂಬಳೆ: ಸ್ವಂತವಾಗಿ ಮನೆಯಿಲ್ಲದವರಿಗೆ ಮನೆ ನಿರ್ಮಿಸುವುದಕ್ಕೆ ಬೇಕಾಗಿ ಕೇಂದ್ರ ಸರಕಾರ ಜ್ಯಾರಿಗೊಳಿಸುವ ಪ್ರಧಾನಮಂತ್ರಿ ಆವಾಜ್ ಯೋಜನ (ಪಿಎಂಎವೈ)ದಂತೆ ಪ್ರಥಮ ಹಂತ ಪೂರ್ತಿಯಾದ ಅಡಿಪಾಯಗಳಲ್ಲಿ ಕಾಡು ಪೊದೆ ಬೆಳೆಯುತ್ತಿದೆ. ಯೋಜನೆ ಜ್ಯಾರಿಗೊಳಿಸಬೇಕಾದ ಅಧಿಕಾರಿಗಳ ಉದಾಸೀನತೆ ಮಹತ್ತರವಾದ ಈ ಯೋಜನೆಯನ್ನು ಈ ರೀತಿಗೆ ತಂದೊಡ್ಡಿದೆ ಎಂಬ ಆರೋಪವಿದೆ.

ಕುಂಬಳೆಯಲ್ಲಿ ಪಿಎಂಎವೈ ಯೋಜನೆಯಲ್ಲಿ ಮಂಜೂರು ಮಾಡಿದ ಮನೆಗೆ ಪ್ರಥಮ ಹಂತವಾದ ಅಡಿಪಾಯ ಸ್ಥಾಪಿಸಿ ಮೂರು ವರ್ಷವಾದರೂ ಮೊದಲ ಹಂತದ ಸಹಾಯ ಮೊತ್ತ ಲಭಿಸಿಲ್ಲವೆಂದು ಆರೋಪವಿದೆ. ಈ ಹಿನ್ನೆಲೆಯಲ್ಲಿ ಸಾಲ ಪಡೆದು ಅಡಿಪಾಯವನ್ನು ನಿರ್ಮಿಸಿದ ಸ್ಥಳವನ್ನು ಅರ್ಜಿದಾರರು ಉಪೇಕ್ಷಿಸಿದ್ದಾರೆ.

ಇದರಿಂದಾಗಿ ಅಡಿಪಾಯ ನಿರ್ಮಿಸಿದ ಸ್ಥಳದಲ್ಲಿ ಕಾಡು ಬೆಳೆಯುತ್ತಿದೆ. ಯೋಜನೆಯಲ್ಲಿ ಮಂಜೂರು ಮಾಡಿದ ಮನೆಗಳಿಗೆ ನಾಲ್ಕು ಹಂತವಾಗಿ ಆರ್ಥಿಕ ಸಹಾಯ ಮಂಜೂರು ಮಾಡಲಾಗುತ್ತಿದೆ. ಮನೆಯ ಅಡಿಪಾಯ ಪೂರ್ತಿಯಾಗುವಾಗ ಮೊದಲ ಕಂತು ನೀಡಬೇಕು.

ಮನೆಯ ಗೋಡೆ ಕಿಟಿಕಿ ಹಂತಕ್ಕೆ ತಲುಪುವಾಗ ದ್ವಿತೀಯ ಕಂತು, ಛಾವಣಿ ಕೆಲಸ ಪೂರ್ತಿಯಾದಾಗ ಮೂರನೇ ಕಂತು, ಮನೆಯ ಸಂಪೂರ್ಣ ಕೆಲಸ ಮುಗಿದ ಬಳಿಕ ನಾಲ್ಕನೇ ಕಂತಿನ ಧನ ಸಹಾಯ ನೀಡಬೇಕು ಎಂಬುದು ವ್ಯವಸ್ಥೆಯಾಗಿದೆ. ಕುಂಬಳೆಯಲ್ಲಿ ಈ ಯೋಜನೆಯಂತೆ ವಸತಿ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಮೂರು ವರ್ಷವಾಗಿಯೂ ಮೊತ್ತ ಲಭಿಸಿದ ಹಲವಾರು ಮಂದಿ ಇರುವುದಾಗಿಯೂ ಕಾಂಗ್ರೆಸ್ ಮಂಡಲ ಅಧ್ಯಕ್ಷ ರವಿ ಪೂಜಾರಿ ಆರೋಪಿಸಿದ್ದಾರೆ. ಯೋಜನೆಗೆ 1,20,೦೦೦ ರೂ. ಕೇಂದ್ರ ಸಹಾಯ ಲಭಿಸುತ್ತದೆ. ಮಹಿಳೆಯರಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

ಸ್ವಂತವಾಗಿ ಮನೆಯೆಂಬ ಕನಸು ಸಾಕಾರಗೊಳ್ಳುವುದೆಂಬ ನಿರೀಕ್ಷೆಯಿಂದ ಯೋಜನೆಗೆ ಅರ್ಜಿ ಸಲ್ಲಿಸಿದವರು ವರ್ಷಗಳಿಂದ ಸಹಾಯ ಲಭಿಸದೆ ಮನೆ ಪೂರ್ತಿಗೊಳಿಸಲು ಸಾಧ್ಯವಾಗದೆ ಸಾಲದ ಕೂಪದಲ್ಲಿರು ವುದಾಗಿಯೂ, ಯೋಜನೆ ಜ್ಯಾರಿಗೆ ಹೊಣೆ ವಹಿಸಿಕೊಂಡಿರುವ ಅಧಿಕಾರಿಗಳ ಉದಾಸೀನತೆ ಈ ರೀತಿಯ ದುಸ್ಥಿತಿಗೆ ಕಾರಣವಾಗಿರುವು ದೆಂದು ರವಿ ಪೂಜಾರಿ ಆರೋಪಿಸಿದ್ದಾರೆ.

You cannot copy contents of this page