ಎಕ್ಕೂರಿನಲ್ಲಿ ಟಿಪ್ಪರ್ ಲಾರಿ- ಬೈಕ್ ಢಿಕ್ಕಿ: ಎಸಿ ಮೆಕ್ಯಾನಿಕ್ ಮೃತ್ಯು

ಮಂಜೇಶ್ವರ: ಟಿಪ್ಪರ್ ಲಾರಿ ಹಾಗೂ ಬೈಕ್ ಮಧ್ಯೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಎಸಿ ಮೆಕ್ಯಾನಿಕ್ ಮೃತಪಟ್ಟ ಘಟನೆ ನಡೆದಿದೆ. ವರ್ಕಾಡಿ ಬಾಕ್ರಬೈಲ್ ಪಾತೂರು ನಿವಾಸಿ ಚಂದ್ರಹಾಸರ ಪುತ್ರ ಸುಧೀಶ್.ಸಿ.ಕೆ (26) ಮೃತಪಟ್ಟ ದುರ್ದೆÊವಿಯಾಗಿ ದ್ದಾರೆ. ಇವರು ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಎಸಿ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಸುಮಾರು 8.30ರ ವೇಳೆ ಮನೆಯಿಂದ ಮಂಗಳೂರಿಗೆ ಕೆಲಸಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎಕ್ಕೂರಿನ ರೈಲ್ವೇ ಸೇತುವೆ ರಸ್ತೆಯಲ್ಲಿ ಬೈಕ್ ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ ಶೈಲಜ, ಸಹೋದರ ಸುಧೀಪ್, ಸಹೋದರಿ ಸಾನಿಯಾ ಹಾಗೂ ಅಪಾರ ಬಂಧು, ಸ್ನೇಹಿತರನ್ನು ಅಗಲಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮುಡಿಪು ರುದ್ರಭೂಮಿಯಲ್ಲಿ ನಿನ್ನೆ ಸಂಜೆ ಅಂತ್ಯಸAಸ್ಕಾರ ನಡೆಯಿತು.

RELATED NEWS

You cannot copy contents of this page