ಬೋವಿಕ್ಕಾನ: ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಬೋವಿಕ್ಕಾನ ಬಿ.ಕೆ. ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಿದ ಶಾಖೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಅಧ್ಯಕ್ಷತೆ ವಹಿಸಿದರು. ಮುಳಿಯಾರು ಪಂ. ಅಧ್ಯಕ್ಷ ಬಿ.ಕೆ. ಮೊಹಮ್ಮದ್ ಕುಂಞಿ ಕೌಂಟರ್ ಉದ್ಘಾಟಿಸಿದರು. ಕಾಸರಗೋಡು ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿ (ಜನರಲ್) ವಿನೋದ್ ಕುಮಾರ್ ಭದ್ರತಾ ಕೊಠಡಿ ಉದ್ಘಾಟಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಮುಳಿಯಾರು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿಸಾ ಮನ್ಸೂರ್, ಸದಸ್ಯ ಜಯಕೃಷ್ಣನ್ ಮಾಸ್ತರ್, ಮಲ್ಲ ಶ್ರೀ ದುರ್ಗಾಪರ ಮೇಶ್ವರಿ ಕ್ಷೇತ್ರ ಟ್ರಸ್ಟಿ ನ್ಯಾಯವಾದಿ ಶಶಿಧರ, ಸಹಕಾರ ಭಾರತಿ ರಾಜ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರು, ಮುಳಿಯಾರು ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಬಾಲಚಂದ್ರನ್ ನಾಯರ್, ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಕೆ. ದಾಮೋದರನ್, ಟೌನ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ಗಂಗಾಧರನ್ ನಾಯರ್ ಪಾಡಿ, ಮುಸ್ತಫ ಬಿಸ್ಮಿಲ್ಲಾಹ್, ಟೌನ್ ಬ್ಯಾಂಕ್ ಎಂಪ್ಲೋಯೀಸ್ ಸಂಘ್ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಮಾತನಾಡಿದರು. ಟೌನ್ ಬ್ಯಾಂಕ್ ಉಪಾಧ್ಯಕ್ಷ ಕೆ. ಮಹಾಬಲ ರೈ ಸ್ವಾಗತಿಸಿ, ಜನರಲ್ ಮೆನೇಜರ್ (ಇನ್‌ಚಾರ್ಜ್) ಪಿ.ಎನ್. ನಿಶಾ ವಂದಿಸಿದರು.




