ಪಿಣರಾಯಿ ಸರಕಾರದ ಹಾದಿಯಲ್ಲೇ ವಿ.ಡಿ. ಸತೀಶನ್‌ರ ಪೊಲೀಸರೂ ಸಾಗುತ್ತಿದ್ದಾರೆ-ಎಂ.ಎಲ್.ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಪ್ರಸ್ತುತ  ವಿ.ಡಿ ಸತೀಶನ್ ಅವರ ಪೊಲೀಸರು ಕೂಡಾ ಈ ಹಿಂದೆ ಪಿಣರಾಯಿ ವಿಜಯನ್ ಸರಕಾರ ಇದ್ದಾಗ ಸಾಗಿದ  ಹಾದಿಯಲ್ಲೇ  ಸಾಗುತ್ತಿದ್ದಾರೆ ಎಂದು  ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆರೋಪಿಸಿದ್ದಾರೆ.  ಉಗ್ರಗಾಮಿಗಳಿಗೆ, ಮಾವೋವಾದಿಗಳಿಗೆ ಕೇರಳವು ಸುರಕ್ಷಿತ ತಾಣವಾಗಿ  ಮಾರ್ಪಟ್ಟಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಛಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎನ್.ಐ.ಎ ಕೊಚ್ಚಿಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದೇ ಇದಕ್ಕೆ ಉದಾಹರಣೆ ಯಾಗಿದೆ.  ಪ್ರವೀಣ್ ನೆಟ್ಟಾರು ಕೊಲೆ ನಡೆದು ನಾಲ್ಕು ವರ್ಷಗಳು ಕಳೆದರೂ ಆರೋಪಿಗಳು ಕೇರಳದಲ್ಲಿ ಸುರಕ್ಷಿತ ವಾಗಿ ನೆಲೆಸಲು ಯಾರು ಸೌಕರ್ಯ ಮಾಡಿಕೊಟ್ಟಿ ದ್ದಾರೆಂಬ ಬಗ್ಗೆ ತನಿಖೆ ಯಾಗ ಬೇಕಾಗಿದೆ.  ಎಲ್‌ಡಿಎಫ್ ಹಾಗೂ ಯುಡಿಎಫ್ ಆಡಳಿತ ಕಾಲದಲ್ಲಿ ಇಂತಹ ಪ್ರಕರಣಗಳ ಆರೋಪಿ ಗಳನ್ನು ಪತ್ತೆಹಚ್ಚಲು  ಹಾಗೂ ಬಂಧಿಸಲು ಕೇರಳ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.  ಮಾಹಿತಿ ಸೋರಿಕೆ ಯಾಗಬಹುದೆಂಬ ಆತಂಕದಿಂದ ಎನ್‌ಐಎ ಹಲವುಬಾರಿ ಇಲ್ಲಿನ ಪೊಲೀಸರಿಗೆ ಮುಂಚಿತ ತಿಳಿಸದೆ ದಾಳಿ ನಡೆಸಿತ್ತು. ಇಂತಹ ಪರಿಸ್ಥಿತಿ ಕೇರಳದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.  ಉಗ್ರಗಾಮಿಗಳಿಗೆ ಕೇರಳದಲ್ಲಿ ಸುರಕ್ಷಿತವಾಗಿರಲು ಎಲ್‌ಡಿಎಫ್ ಹಾಗೂ ಯುಡಿಎಫ್ ಅನುಸರಿಸುತ್ತಿ ರುವ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವೇ  ಕಾರಣವೆಂದು ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ.

RELATED NEWS

You cannot copy contents of this page