ಕಾಸರಗೋಡಿನಲ್ಲಿ ವಿಶ್ವ ಪರಿಸರದಿನಾಚರಣೆ

ಕಾಸರಗೋಡು: ವಿಶ್ವ ಪರಿಸರದಿನದಂಗವಾಗಿ ಸೋಶ್ಯಲ್ ಪೊಲೀಸಿಂಗ್ ಡಿವಿಶನ್, ಎಸ್‌ಪಿಸಿ ಕಾಸರಗೋಡು, ಶ್ರೀ ಕುರುಂಬಾ  ಭಗವತೀ ಕ್ಷೇತ್ರ ಕಡಪ್ಪುರ ಎಂಬಿವುಗಳ ಸಂಯುಕ್ತಾಶ್ರಯ ದಲ್ಲಿ ಇಂದು ಬೆಳಿಗ್ಗೆ ಕಾಸರ ಗೋಡು ಕಡಪ್ಪುರದಲ್ಲಿ ಗಿಡ ನೆಟ್ಟು ಶುಚೀಕರಣ ನಡೆಸಲಾಯಿತು.

ಭೂಮಿಯನ್ನು ರಕ್ಷಿಸಿ ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಎಚ್‌ಎಸ್‌ನ  ಸ್ಟುಡೆಂಟ್ ಪೊಲೀಸ್, ನಾಯಮ್ಮಾರ್ ಮೂಲೆ ಟಿಐಎಚ್‌ಎಸ್‌ಎಸ್, ತಳಂಗರೆ ಜಿಎಂವಿಎಚ್ ಎಸ್‌ಎಸ್‌ನ 1975 ಬ್ಯಾಚ್  ಸಹಕಾರ ನೀಡಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭಾ ಚೆಯರ್‌ಪರ್ಸನ್ ಶಾಹಿನ ಸಲೀಂ, ಎಎಸ್‌ಪಿ ಅಚ್ಯುತ್ ಅಶೋಕ್, ಸಿಐ ನಳಿನಾಕ್ಷನ್, ಎಸ್‌ಪಿಸಿ ಅಡಿಶನಲ್ ಜಿಲ್ಲಾ ನೋಡಲ್ ಆಫೀಸರ್ ಪಿ.ಕೆ. ರಾಮಕೃಷ್ಣನ್, ಜನಮೈತ್ರಿ ಅಡಿಶನಲ್ ಜಿಲ್ಲಾ ನೋಡಲ್ ಆಫೀಸರ್ ಎ. ಶಶಿಧರನ್, ನಗರಸಭಾ ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.

You cannot copy contents of this page