ಯುವಕ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಏಕಾಂಗಿಯಾಗಿ ವಾಸಿಸುತ್ತಿದ್ದ ಯುವಕ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮಣಿಯಂಪಾರೆ ಬಳಿಯ ಮಂಜೊಟ್ಟಿ ಎಂಬಲ್ಲಿನ ದಿ| ದೇವಣ್ಣ ನಾಯ್ಕ್-ಲಲಿತ ದಂಪತಿಯ ಪುತ್ರ ಪ್ರವೀಣ (41) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕನಾದ ಇವರು ಅವಿವಾಹಿತನಾಗಿದ್ದಾರೆ. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.

ಇವರಿಗೆ ಸಹೋದರಿ ನಿನ್ನೆ ಬೆಳಿಗ್ಗಿನಿಂದ ಹಲವು ಬಾರಿ ಫೋನ್ ಕರೆ ಮಾಡಿದರೂ ಫೋನೆತ್ತಲಿಲ್ಲ ವೆನ್ನಲಾಗಿದೆ. ಈ ಹಿನ್ನೆಲೆಯಲ್ಲ್ಲಿ ನಿನ್ನೆ ಸಂಜೆ ಮನೆಗೆ ಬಂದು ನೋಡಿದಾಗ ಪ್ರವೀಣ ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಬದಿಯಡ್ಕ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಇಂದು ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು  ಜನರಲ್ ಆಸ್ಪತ್ರೆಗೆ ತಲುಪಿಸಲಾಗುವುದು.

ಮೃತರು ಸಹೋದರ-ಸಹೋದರಿಯರಾದ ಸಂತೋಷ್ ಕುಮಾರ್, ಶಾರದ, ಪುಷ್ಪ, ಉಮಾವತಿ, ಗಂಗಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page