ಸೀತಾಂಗೋಳಿ: ಸ್ನೇಹಿತೆಯ ಮದುವೆಗೆ ಹೋದ ಯುವತಿ ಮರಳಿ ಬಂದಿಲ್ಲವೆಂದು ತಿಳಿಸಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೀತಾಂಗೋಳಿ ಪೆರ್ಣೆ ಎಡನಾಡಿನ ಕರುಣಾಕರರ ಪತ್ನಿ ವನಿತ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ತಿಂಗಳ 6ರಂದು ಮಧ್ಯಾಹ್ನ 1 ಗಂಟೆಗೆ ಸ್ನೇಹಿತೆಯ ಮದುವೆಗೆಂದು ತಿಳಿಸಿ ಪುತ್ರಿ ಕಾವ್ಯ (19) ಮನೆಯಿಂದ ತೆರಳಿದ್ದಳು. ಆದರೆ ಮದುವೆ ಕಳೆದು 10 ದಿನಗಳಾದರೂ ಪುತ್ರಿ ಮರಳಿ ಬಂದಿಲ್ಲವೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.






