ಮಧ್ಯರಾತ್ರಿ ಅಪ್ರಾಪ್ತೆಯ ಕೊಠಡಿಗೆ ನುಗ್ಗಿದ ಯುವಕ: ಕೂಡಿಹಾಕಿದ ಮನೆಮಂದಿ; ಬಲವಂತದಿಂದ ಕೊಂಡೊಯ್ದ ಗೆಳೆಯರು

ಕಲ್ಲಿಕೋಟೆ: ಅಪ್ರಾಪ್ತೆಯ ಕೊಠಡಿಗೆ ಅತಿಕ್ರಮಿಸಿ ನುಗ್ಗಿದ ಯುವಕನನ್ನು ಮನೆ ಮಂದಿ ಕೋಣೆಯೊಳಗೆ ಕೂಡಿ ಹಾಕಿದರು. ಗೆಳೆಯರು ತಲುಪಿ ಮನೆಯವರನ್ನು ಆಕ್ರಮಿಸಿ ಯುವಕನನ್ನು ಕೊಂಡೊಯ್ದರು. ತಾಮರಶ್ಶೇರಿ ಈಂಙಾಪುಳದಲ್ಲಿ ಇಂದು ಮುಂಜಾನೆ ೨ ಗಂಟೆ ವೇಳೆ ಘಟನೆ ನಡೆದಿದೆ. ಅಡಿವಾರಂ ಪಳ್ಳಿಯಾಲ ನಿವಾಸಿ 19ರ ಹರೆಯದ ಮಿಸ್ಬಾಹುಲ್ ವಿರುದ್ಧ ಪೋಕ್ಸೋ ಪ್ರಕರಣವನ್ನು ತಾಮರಶ್ಶೇರಿ ಪೊಲೀಸರು ದಾಖಲಿಸಿದ್ದಾರೆ. ಬಾಲಕಿಯ ಕೊಠಡಿಯಲ್ಲಿ ಅಪರಿಚಿತನ ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡಿದ್ದಾರೆ. ಬಳಿಕ ಯುವಕನನ್ನು ಆ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಯುವಕ ಫೋನ್ ಕರೆ ಮಾಡಿದ್ದು, ಆ ವೇಳೆ ಮೂರು ಬೈಕ್‌ಗಳಲ್ಲಾಗಿ ಗೆಳೆಯರು ತಲುಪಿದ್ದಾರೆ. ಮನೆ ಮಂದಿಯನ್ನು ಆಕ್ರಮಿಸಿ ಯುವಕನನ್ನು ಬಲವಾಗಿ ಎಳೆದೊಯ್ದಿದ್ದಾರೆ. ಮನೆಯೊಳಗೆ ನುಗ್ಗಿ ಆಕ್ರಮಣ ನಡೆಸಿ ಮನೆಮಂದಿಗೆ ಹಲ್ಲೆಗೈದ ಬಗ್ಗೆ ನೀಡಿದ ದೂರಿನಲ್ಲಿ ಏಳು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಹಿಳೆಯರ ವಿರುದ್ಧ ಆಕ್ರಮಣ, ಹಲ್ಲೆ, ಮನೆಗೆ ಅತಿಕ್ರಮಿಸಿ ನುಗ್ಗಿದ ಬಗ್ಗೆ ಕೇಸು ದಾಖಲಿಸಲಾಗಿದೆ. ಈ ಬಾಲಕಿಯೊಂದಿಗೆ 19ರ ಹರೆಯದ ಯುವಕನಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕವಿತ್ತೆನ್ನಲಾಗಿದೆ. ಬಾಲಕಿ ಕರೆ ಮಾಡಿದಂತೆ ಯುವಕ ಅಲ್ಲಿಗೆ ತಲುಪಿರಬೇಕೆಂದು ಸೂಚನೆ ಲಭಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page