ಯುವಮೋರ್ಛಾ ಜಿಲ್ಲಾ ಸಮಿತಿಯಿಂದ ಯುವ ಸಂಗಮ

ಕಾಸರಗೋಡು: ಯುವ ಮೋರ್ಛಾ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಯುವ ಸಂಗಮ ನಡೆಸಲಾಯಿತು. ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್ ಉದ್ಘಾಟಿಸಿದರು. ಯುವಜನಾಂಗಕ್ಕೆ ಆತ್ಮವಿಶ್ವಾಸ ನೀಡುವಂತ ಆಡಳಿತ ವಾಗಿದೆ ನರೇಂದ್ರ ಮೋದಿಯವ ರದ್ದೆಂದು ಅವರು ನುಡಿದರು. ಉನ್ನತ ಶಿಕ್ಷಣ ಪಡೆದ ಯುವಕರು ಹೆಚ್ಚಾಗಿ ಕೃಷಿಗೆ ಸಂಬಂಧಿಸಿದ ವಲಯಗಳಲ್ಲಿ ತೊಡಗಿಸಿ ಕೊಳ್ಳುವುದು ಶುಭ ಸೂಚಕವಾಗಿದೆ ಎಂದು ಮಹೇಶ್ ಗೋಪಾಲ್ ನುಡಿದರು. ಯುವಮೋರ್ಚ ಜಿಲ್ಲಾಧ್ಯಕ್ಷ ಅಶ್ವಿನ್ ಅಧ್ಯಕ್ಷತೆ ವಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ನ್ಯಾಯವಾದಿ ಧನುಷ್ ಎಚ್.ಎನ್, ಪ್ರದೀಪ್ ತಾಳಿಪಡ್ಪು ಮಾತನಾಡಿದರು. ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಿದ ಯುವತಿ, ಯುವಕರನ್ನು ಅಭಿನಂದಿಸಲಾಯಿತು.

RELATED NEWS

You cannot copy contents of this page