ಆಟೋ ಚಾಲಕನ ಮೇಲೆ ಆಕ್ರಮಣ ಯತ್ನ: ಆರೋಪಿಯ ಬಂಧನ

ಕುಂಬಳೆ: ಆಟೋ ಚಾಲಕನ ಮೇಲೆ ಆಕ್ರಮಣಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿ ನರಹತ್ಯಾ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.

ಶಾಂತಿಪಳ್ಳ ನಿವಾಸಿ ಶಿವರಾಮನ್ ಯಾನೆ ಶಿವನ್ ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಕುಂಬಳೆ ಪೇಟೆಯ ಆಟೋ ಸ್ಟ್ಯಾಂಡ್‌ನಲ್ಲಿ ಘಟನೆ ನಡೆದಿದೆ.  ಕುಂಬಳೆಯ ಆಟೋ ಚಾಲಕನೂ ಕೊಡ್ಯಮ್ಮೆ ಬಳಿಯ ಮುಳಿಯಡ್ಕ ನಿವಾಸಿ ಇಬ್ರಾಹಿಂ (42)ರ ಮೇಲೆ ಆಕ್ರಮಣಕ್ಕೆತ್ನಿಸಿದ ಆರೋಪದಂತೆ ಶಿವರಾಮನ್‌ನನ್ನು ಬಂಧಿಸಲಾಗಿದೆ. ನಿನ್ನೆ ಸಂಜೆ  ಕುಂಬಳೆ ಆಟೋ ಸ್ಟ್ಯಾಂಡ್‌ನಲ್ಲಿ ಇಬ್ರಾಹಿಂ ಹಾಗೂ ಶಿವರಾಮನ್ ಮಧ್ಯೆ ವಾಗ್ವಾದ ನಡೆದಿತ್ತೆನ್ನಲಾಗಿದೆ, ಈ ವೇಳೆ ಶಿವರಾಮನ್ ಸೊಂಟದಲ್ಲಿದ್ದ ಚಾಕು ತೆಗೆದು ಇರಿಯಲು ಯತ್ನಿಸಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಇಬ್ರಾಹಿಂ ನೀಡಿದ ದೂರಿ ನಂತೆ ಶಿವರಾಮನ್ ವಿರುದ್ಧ ಪೊಲೀ ಸರು ನರಹತ್ಯಾಯತ್ನ ಕೇಸು ದಾಖಲಿಸಿ ಬಂಧಿಸಿದ್ದಾರೆ. ಬಂಧಿತನನ್ನು  ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.

RELATED NEWS

You cannot copy contents of this page