ಎಕೆಪಿಎ ಕುಂಬಳೆ ವಲಯ ಸಮ್ಮೇಳನ

ಕುಂಬಳೆ: ಆಲ್ ಕೇರಳ ಫೊಟೋಗ್ರಾರ‍್ಸ್ ಅಸೋಸಿಯೇಶನ್ ಕುಂಬಳೆ ವಲಯ ಸಮ್ಮೇಳನ ಕುಂಬಳೆ ಮಾಧವ ಪೈ ಸಭಾಂಗಣದ ವಿ.ವಿ.ಚಂದ್ರನ್ ವೇದಿಕೆಯಲ್ಲಿ ಜರಗಿತು. ಕುಂಬಳೆ ವಲಯ ಉಪಾಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಧ್ವಜಾರೋಹಣಗೈದು, ಅಧ್ಯಕ್ಷತೆ ವಹಿಸಿದ್ದರು.
ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಉದ್ಘಾಟಿಸಿ ಸಂಘಟನಾತ್ಮಕ ವಿಚಾರಗಳನ್ನು ಹಂಚಿಕೊAಡರು. ರಾಜ್ಯಸಮಿತಿ ಸದಸ್ಯ ಪ್ರಶಾಂತ್ ತೈಕಡಪ್ಪುರಂ ಮುಖ್ಯ ಅತಿಥಿ ಯÁಗಿ ಪಾಲ್ಗೊಂಡು ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ, ಕೋಶಾದಿsಕಾರಿ ಸುನಿಲ್ ಕುಮಾರ್ ಪಿ.ಟಿ., ಉಪಾಧ್ಯಕ್ಷರಾದ ವೇಣು ವಿ.ವಿ., ಶರೀಫ್, ಜೊತೆ ಕಾರ್ಯದರ್ಶಿ ರಾಜೇಂದ್ರನ್, ನೇಚರ್ ಕ್ಲಬ್ ಸಂಚಾಲಕ ದಿನೇಶ್, ಅಶೋಕನ್ ಪೊಯಿನಾಚಿ, ಸುಕು, ಅನೂಪ್ ಚಂದೇರ, ವಿಜಯನ್, ವೇಣು ಗೋಪಾಲ ಎ., ಸುರೇಶ್ ಆಚಾರ್ಯ, ಅಬ್ದುಲ್ ನವಾಸ್, ನವೀನ್ ಕುಮಾರ್, ಶ್ಯಾಮಪ್ರಸಾದ ಸರಳಿ ಶುಭಹಾರೈಸಿದರು. ವಲಯ ಕಾರ್ಯದರ್ಶಿ ನಿತ್ಯಪ್ರಸಾದ್ ಸ್ವಾಗತಿಸಿ, ಪಿ.ಆರ್.ಒ. ಪ್ರಮೋದ್ ಕುಂಬಳೆ ವಂದಿಸಿದರು. ನಂತರ ಪ್ರತಿನಿದಿs ಸಮ್ಮೇಳನ ನಡೆಯಿತು.

You cannot copy contents of this page