ಕಣ್ಣೂರಿನಲ್ಲಿ ಅತ್ಯಾಧುನಿಕ ಚಲನವೈಕಲ್ಯ ಚಿಕಿತ್ಸಾ ಆಸ್ಪತ್ರೆ ಉದ್ಘಾಟನೆ

ಕಣ್ಣೂರು:  ಬೇಬಿ ಮೆಮೋರಿಯಲ್ ಹಾಸ್ಟಿಟಲ್‌ನಲ್ಲಿ ಪಾರ್ಕಿಸನ್ಸ್, ಜನಿಟಿಕಲ್ ಡಿಸ್ಟೋನಿಯ ಮೊದಲಾದ ಚಲನ ವೈಕಲ್ಯಗಳು ತಗಲಿದ ವ್ಯಕ್ತಿಗಳಿಗೆ ಸಮಗ್ರ ಹಾಗೂ ಸಂಯೋಜಿತ  ಚಿಕಿತ್ಸೆ  ನೀಡುವುದಕ್ಕಾಗಿ ಆರಂಭಿಸಿದ ಪ್ರತ್ಯೇಕ ಪಾರ್ಕಿಸನ್ಸ್ ಆಂಡ್ ಮೂವ್‌ಮೆಂಟ್ ಡಿಸೋರ್ಡರ್ಸ್ ಸೆಂಟರ್‌ನ ಉದ್ಘಾಟನೆ ಬೇಬಿ ಮೆಮೋರಿಯಲ್ ಹಾಸ್ಟಿಟಲ್‌ನ ಕ್ಲಸ್ಟರ್  ಸಿಇಒ ನಿರೂಪ್ ಮುಂಡಯಾ ಡನ್ ನಿರ್ವಹಿಸಿದರು. ಈ ರೀತಿಯ ರೋಗಕ್ಕೆ ಉತ್ತರ ಮಲಬಾರ್‌ನಲ್ಲಿ ಚಿಕಿತ್ಸೆ ನೀಡುವ ಮೊದಲ ಅತ್ಯಾಧುನಿಕ ಕೇಂದ್ರವಿದಾಗಿ ದೆಯೆಂದು ಅವರು ತಿಳಿಸಿದ್ದಾರೆ.  ನ್ಯೂರೋಲೋಜಿಸ್ಟ್‌ಗಳು, ನ್ಯೂರೋ ಫಿಸಿಯೋ ತೆರಾಫಿಸ್ಟ್‌ಗಳು, ಸೈಕೋ ಲಾಜಿಸ್ಟ್‌ಗಳು, ಡಯಾಟೀಶಿ ಯನ್ ಎಂಬಿವರು ಒಂದೇ ಸ್ಥಳದಲ್ಲಿ  ತಪಾಸಣೆಗೆ ಲಭ್ಯಗೊಳಿಸುವ ಪ್ರತ್ಯೇಕ ಔಟ್ ಪೇಶೆಂಟ್ ಏರಿಯಾ ವ್ಯವಸ್ಥೆ ರೋಗಿಗಳಿಗೆ ವಿವಿಧ ಕಡೆಗಳಲ್ಲಿ ಕಾದು ನಿಲ್ಲುವ ಸಮಸ್ಯೆ ಇಲ್ಲದಂತೆ ಮಾಡುತ್ತದೆ.  ಅದೇ ರೀತಿ ಪ್ರತ್ಯೇಕವಾಗಿ ಸಿದ್ಧಪಡಿಸಿದ ಐಸಿಯು ಹಾಸಿಗೆಗಳು, ರೋಗಿಗಳ ಕೊಠಡಿಗಳು ಮೊದಲಾದವು ಈ ಕೇಂದ್ರದ ಪ್ರಧಾನ ಪ್ರತ್ಯೇಕತೆಯಾಗಿದೆಯೆಂದು ನಿರೂಪ್ ಮುಂಡಯಾಡನ್ ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಅಡ್ವೈಸರ್ ಡಾ| ಮುಹಮ್ಮದ್ ಅಬ್ದುಲ್ ನಾಸರ್ ಇ.ಕೆ, ಎಜಿಎಂ ಮನೋಜ್ ಜಿ.ಎಂ, ನ್ಯೂರೋಲಜಿ ವಿಭಾಗ ಮುಖ್ಯಸ್ಥ ಡಾ| ಎಂ. ಮೋಹನನ್, ಡಾ| ಸುಜಿತ್ ಓವಲತ್, ಡಾ| ಸುಹಾಸ್ ಕೆ.ಟಿ, ಡಾ| ಜಿಸಾ ಮೆರಿನ್ ಜೋಯ್ ಎನ್, ಮಂಜು ಜೋಸೆಫ್, ಜಗದಿ ಜ್ಯೋತಿಷ್ ಸಿ.ವಿ, ಬಿ.ಆರ್.ಪಿ. ಉಣ್ಣಿತ್ತಾನ್ ಭಾಗವಹಿಸಿದರು.

You cannot copy contents of this page