ಕುಂಟಾರಿನಲ್ಲಿ ವಾಹನ ಅಪಘಾತ: ಯುವಕ ದಾರುಣ ಮೃತ್ಯು

ಮುಳ್ಳೇರಿಯ: ಕುಂಟಾರಿನಲ್ಲಿ ನಿನ್ನೆ ಸಂಜೆ ವಾಹನ ಅಪಘಾತದಲ್ಲಿ ಯುವಕನೋರ್ವ  ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಅಡೂರು ಕೊಟ್ಯಾಡಿಯ ಶೇಷಪ್ಪ ಎಂಬವರ ಪುತ್ರ ಯೋಗೀಶ್ (19) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ 5.30ರ ವೇಳೆ ಬೈಕ್ ಹಾಗೂ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಢಿಕ್ಕಿಯಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಯೋಗೀಶ್‌ರನ್ನು ಕೂಡಲೇ ಕಾಸರಗೋಡಿನ ಖಾಸಗಿ  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ,ತಾಯಿ ಶಾರದ, ಸಹೋದರ ಶಿವಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಪಘಾತ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page