ಕೊಂಡೆವೂರು ಮಠದಲ್ಲಿ ಭಜನಾ ಸಪ್ತಾಹ ಮಂಗಳಾಚರಣೆ ನಾಳೆ: ಅತಿಥಿಗೃಹ ಲೋಕಾರ್ಪಣೆ 2ರಂದು

ಉಪ್ಪಳ: ಕೊಂಡೆವೂರು ಶೀ ನಿತ್ಯಾನಂದ ಯೋಗಾಶ್ರಮದಲ್ಲಿ 19ನೇ ವರ್ಷದ ಅಖಂಡ ಭಜನಾ ಸಪ್ತಾಹ ನಾಳೆ ಸೂರ್ಯಾಸ್ತ 6.37ಕ್ಕೆ ಭಜನಾ ಮಂಗಳಾಚರಣೆಯೊAದಿಗೆ ಸಮÁಪ್ತಿ ಗೊಳ್ಳಲಿದೆ. 2ರಂದು ಪ್ರಾತಃಕಾಲ 7.30 ಕ್ಕೆ ಶ್ರೀ ಕ್ಷೇತ್ರ ಕಟೀಲಿನ ಅನುವಂ ಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾ ದೇವೀ ಪ್ರಸಾದ ಆಸ್ರಣ್ಣರ ಆಚಾರ್ಯ ತ್ವದಲ್ಲಿ ಶ್ರೀ ಲಕ್ಷಿö್ಮನಾರಾಯಣ ಹೃದಯ ಹೋಮ ಆರಂಭಗೊAಡು ಪೂರ್ವಾ ಹ್ನ 10.30ಕ್ಕೆ ಪೂರ್ಣಾಹುತಿ ಯಾದ ಬಳಿಕ ಮಹಾಪೂಜೆ ನಡೆಯಲಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀ ಜಿಯವರ ಉಪಸ್ಥಿತಿಯಲ್ಲಿ ಜರಗಲಿ ರುವ ಧಾರ್ಮಿಕ ಸಭಾಕಾರ್ಯ ಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನೂತನ ಅತಿಥಿಗೃಹ “ವಿಶ್ವಂ” ಲೋಕಾರ್ಪಣೆ ಮಾಡಲಿರು ವರು. ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಇವರ ಅಧ್ಯಕ್ಷತೆ ಯಲ್ಲಿ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಪ್ರತಾಪ್ ಚಂದ್ರ ಸಾರಂಗಿ, ಪಿ.ಟಿ.ಉಷಾ, ಕೆ.ನಾರಾಯಣ ಬೆಂಗಳೂರು, ಡಾ. ಕೆ.ಸಿ ರಾಮಮೂರ್ತಿ, ರಮೇಶ್ ರಾಜು, ರಘುರಾಮ ಶೆಟ್ಟಿ , ಎ.ಜೆ ಶೇಖರ್ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೆ.ಕೆ. ಶೆಟ್ಟಿ, ಮತ್ತು ವಿಶ್ವನಾಥ್ ವೇಂಗರೆ ಇವರನ್ನು ಸನ್ಮಾನಿಸಲಾಗುವುದು. 2ರಿಂದ ಸವಿಜೀವನಂ ನೃತ್ಯಕಲಾ ಕ್ಷೇತ್ರ ಕೊಂಡೆವೂರು ಇದರ ವಿದುಷಿ ಸವಿತಾಜೀವನ್ ಮತ್ತು ಶಿಷ್ಯ ವೃಂದದವರಿAದ “ನೃತ್ಯ ವೈಭವ” ನಡೆಯಲಿದೆ. ಸಂಜೆ 6ಕ್ಕೆ ನಕ್ಷತ್ರನವದಲ್ಲಿ ನವಗ್ರಹ ಪೂಜೆ ಮತ್ತು ದೀಪೋತ್ಸವ ನಡೆಯಲಿದೆ.

RELATED NEWS

You cannot copy contents of this page