ಧಾರ್ಮಿಕ ಮುಂದಾಳು ನಿಧನ

ಬದಿಯಡ್ಕ: ಕೃಷಿಕ, ಧಾರ್ಮಿಕ ಮುಂದಾಳು ವಳಮಲೆ ಪದ್ಮನಾಭ ಶೆಟ್ಟಿ (68) ನಿಧನ ಹೊಂದಿದರು. ಅಸೌಖ್ಯ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ವಳಮಲೆ ಜನನ ತರವಾಡು ಸಮಿತಿ ಅಧ್ಯಕ್ಷ, ಬದಿಯಡ್ಕ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಅಧ್ಯಕ್ಷ, ಬಂಟರ ಸಂಘ ಕುಂಬಳೆ ಫಿರ್ಕ ಕಾರ್ಯದರ್ಶಿ ಸಹಿತ ಹಲವು ಸಾಮಾಜಿಕ, ಧಾರ್ಮಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪೆರಡಾಲ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಯಾಗಿದ್ದ ಮೃತರು ಪತ್ನಿ ಮಲ್ಲಿಕಾ ಶೆಟ್ಟಿ, ಮಕ್ಕಳಾದ ಪ್ರತೀಕ್, ಪ್ರಣೀತ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page