ನಿದ್ರಿಸುತ್ತಿದ್ದ ತಾಯಿಗೆ ಇರಿತ : ಮಗ ಪೊಲೀಸ್ ಕಸ್ಟಡಿಯಲ್ಲಿ

ಉಪ್ಪಳ:  ನಿದ್ರಿಸುತ್ತಿದ್ದ ತಾಯಿಗೆ ಮಗ ಇರಿದು ಗಾಯಗೊಳಿಸಿದ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಮಣಿಮುಂಡ ಎಂಬಲ್ಲಿ ನಡೆದಿದೆ.  ಶಮೀಮಬಾನು ಎಂಬವರು ಇರಿತದಿಂದ ಗಾಯಗೊಂ ಡಿದ್ದಾರೆ. ಇಂದು ಮುಂಜಾನೆ ಈ ಘಟನೆ ನಡೆದಿದೆ.  ಇರಿತದಿಂದ ಮು ಖಕ್ಕೆ ಗಂಭೀರ ಗಾಯಗೊಂಡಿರುವ ಶಮೀಮಬಾನುರನ್ನು ಮೊದಲು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಅನಂತರ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಗೆ ಸಂಬಂಧಿಸಿ ಮಗನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತನನ್ನು  ತನಿಖೆಗೊಳಪಡಿಸಿದರೂ ಯಾವುದೇ ಮಾಹಿತಿ ಲಭಿಸಿಲ್ಲ. ಇರಿದು ಗಾಯಗೊ ಳಿಸಲು ಕಾರಣವೇನೆಂದು ತಿಳಿದುಬಂ ದಿಲ್ಲ. ಈ ಹಿನ್ನೆಲೆಯಲ್ಲಿ  ಶಮೀಮ ಬಾನು ಅವರ ಹೇಳಿಕೆ ದಾಖಲಿಸಲು ಪೊಲೀಸರು ಪರಿಯಾರಕ್ಕೆ ತೆರಳಿದ್ದಾ ರೆಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page