ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಅರ್ತಿಪ್ಪಳ್ಳ ಬಾರಡ್ಕ ಹೌಸ್‌ನ ಐತಪ್ಪ ನಾಯ್ಕ-ಪಾರ್ವತಿ ದಂಪತಿ ಪುತ್ರಿ ಹಾಗೂ ಸುಬ್ರಾಯ ನಾಯ್ಕರ ಪತ್ನಿ ಲಕ್ಷ್ಮಿ (೬೧) ನಿನ್ನೆ ಸಂಜೆ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸರು ಈ ಬಗ್ಗೆ  ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ.

ಮೃತರು ಮಕ್ಕಳಾದ ಗಾಯತ್ರಿ, ನಯನ್‌ಕುಮಾರ್, ಬೆನಕಶ್ರೀ, ಅಳಿಯಂದಿರಾದ ಸಿಜಿತ್, ವಿನಯ ಮತ್ತು ಸಹೋದರ ಮಹಾಲಿಂಗ ನಾಯ್ಕ ಎಂಬವರನ್ನು ಅಗಲಿದ್ದಾರೆ.

RELATED NEWS

You cannot copy contents of this page