ಪರಪ್ಪ ಬ್ಲೋಕ್‌ಗೆ ರಾಷ್ಟ್ರೀಯ ಪುರಸ್ಕಾರ : ಪ್ರಧಾನಮಂತ್ರಿಯಿಂದ ಸ್ವೀಕರಿಸಿದ ಜಿಲ್ಲಾಧಿಕಾರಿ

ಕಾಸರಗೋಡು: ದೇಶದ ಅಸ್ಪಿರೇ ಷನ್ ಬ್ಲೋಕ್‌ಗಳ ಪೈಕಿ ಅಭಿನಂದ ನಾರ್ಹ ಸೇವೆಯ ಮೂಲಕ, ಸಾರ್ವ ಜನಿಕ ಆಡಳಿತೆ ಯಲ್ಲಿ ಗಮನಾರ್ಹ ಸಾಧನೆಗೈದಿ ರುವುದನ್ನು ಪರಿಗಣಿಸಿ ಜಿಲ್ಲೆಯ ಪರಪ್ಪ ಬ್ಲೋಕ್‌ಗೆ ಕೇಂದ್ರ ಸರಕಾರ ಘೋಷಿಸಿದ ಪ್ರಧಾನಮಂತ್ರಿ ಯವರ 2024ರ ಪುರಸ್ಕಾರವನ್ನು   ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಭ ಶೇಖರನ್ ದಿಲ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಂದ ಸ್ವೀಕರಿಸಿದರು. ನವದೆಹಲಿಯಲ್ಲಿ ನಡೆದ ಈ ಪುರಸ್ಕಾರ ವಿತರಣಾ ಕಾರ್ಯಕ್ರಮ ದಲ್ಲಿ ಹಲವು ಗಣ್ಯರು ಭಾಗವಹಿಸಿದರು.ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋ ಗದೊಂದಿಗೆ ರೂಪು ನೀಡಲಾದ  ಯೋಜನೆಯ ಪ್ರಕಾರ ಜ್ಯಾರಿಗೊಳಿಸಲಾದ ಅಭಿವೃದ್ಧಿ ಕಲ್ಯಾಣ ಯೋಜನೆಯಲ್ಲಿ ಪ್ರಸ್ತುತ ಬ್ಲೋಕಿನಲ್ಲಿ ಸಾಧಿಸಲಾದ ಪ್ರಶಂಸನೀಯ ಸಾಧನೆಗಳನ್ನು ಗುರುತಿಸಿ, ಈ ಬ್ಲೋಕನ್ನು ಪ್ರಧಾನಮಂತ್ರಿಯವರ ಪುರಸ್ಕಾರಕ್ಕೆ ಆರಿಸಲಾಗಿದೆ. ಒಟ್ಟು ೪೬೨ ಅಸ್ಪಿರೇಷನ್ ಬ್ಲೋಕ್‌ಗಳ ಪೈಕಿ ಪರಪ್ಪ ಬ್ಲೋಕನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು.

RELATED NEWS

You cannot copy contents of this page