ಪೆರ್ಲ ಕೃಷ್ಣ ಭಟ್ 100ರ ನೆನಪು : ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಗೌರವ

ಪೆರ್ಲ: ಅಧ್ಯಾಪಕ, ಅರ್ಥದಾರಿ ವಿಧ್ವಾಂಸರಾಗಿದ್ದ ದಿ| ಪೆರ್ಲ ಕೃಷ್ಣ ಭಟ್‌ರ 100ರ ನೆನಪು ಕಾರ್ಯಕ್ರಮ ಇಲ್ಲಿನ ಭಾರತೀ ಸದನದಲ್ಲಿ ಜರಗಿತು.  ಪೆರ್ಲ ಕೃಷ್ಣ ಭಟ್ಟ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕರ್ನಾಟಕ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಂಸ್ಮರಣ ಭಾಷಣ ಮಾಡಿದರು. ಇದೇ ವೇಳೆ ಹಿರಿಯ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರಿಗೆ ಕೃಷ್ಣ ಭಟ್ಟರ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಎಂ. ಪ್ರಭಾಕರ ಜೋಶಿ ಅಭಿನಂದನಾ ಭಾಷಣ ಮಾಡಿದರು.  ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೃಷ್ಣ ಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ರಾಜರಾಮ, ಅನುಕ್ತ ಪ್ರಾರ್ಥನೆ ಹಾಡಿದರು. ಡಾ. ಶ್ರೀಪತಿ ಕಜಂಪಾಡಿ ವಂದಿಸಿದರು. ನಿವೃತ್ತ ಶಿಕ್ಷಕ ರಾಜೇಂದ್ರ ಬಜಕೂಡ್ಲು ನಿರೂಪಿಸಿದರು.

RELATED NEWS

You cannot copy contents of this page