ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ : ಪೈಕ-ಮುಳ್ಳೇರಿಯ ರಸ್ತೆ ಕಾಮಗಾರಿ ಉದ್ಘಾಟನೆ

ಮುಳ್ಳೇರಿಯ: ಪೈಕ- ನೀರೋಳಿಪಾರೆ- ಮುಳ್ಳೇರಿಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಚಾಲನೆ ನೀಡಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿಸೇರಿಸಿ ಅಭಿವೃದ್ಧಿಪಡಿಸುವ ಕಾರಡ್ಕ ಪಂ. ವ್ಯಾಪ್ತಿಯ ಈ ರಸ್ತೆಯ ಕಾಮಗಾರಿಗೆ ಅಡ್ಕ ಪೌರ್ಣಮಿ ಕ್ಲಬ್ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿ. ಮಿತ್ರ ವರದಿ ಮಂಡಿಸಿದರು. ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು, ಕಾರಡ್ಕ ಪಂ. ಅಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾ ಪಂ. ಸದಸ್ಯೆ ಎಂ. ಶೈಲಜಾ ಭಟ್, ಬ್ಲೋಕ್ ಮೆಂಬರ್ ಸ್ಮಿತಾ  ಪ್ರಿಯರಂಜನ್, ಕಾರಡ್ಕ ಪಂ. ಸದಸ್ಯರಾದ ಪುಷ್ಪಾ, ಎ.ಎಸ್. ತಸ್ನಿ, ತಂಬಾನ್ ಮಾತನಾಡಿದರು. ಪಿ.ಸಿ. ವೇಣುಗೋಪಾಲ್ ಸ್ವಾಗತಿಸಿ, ಇಂಜಿನಿಯರ್ ಕೆ. ನೀರಜ್ ವಂದಿಸಿದರು.

RELATED NEWS

You cannot copy contents of this page