ಪ್ಲಸ್ಟು ವಿದ್ಯಾರ್ಥಿನಿಗೆ ಗರ್ಭದಾನ : ಯುವಕನ ವಿರುದ್ಧ ಪೋಕ್ಸೋ ಕೇಸು
ಕಾಸರಗೋಡು: ಪ್ಲಸ್ಟು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯನ್ನಾಗಿಸಿದ ಆರೋಪದಂತೆ ತಳಂಗರೆ ನಿವಾಸಿ ವಿರುದ್ಧ ಬೇಡಗಂ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.
ತಳಂಗರೆಯ ಶಿಹಾಬ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಿಂಗಳುಗಳ ಹಿಂದೆ ಶಿಹಾಬ್ ಪ್ಲಸ್ಟು ವಿದ್ಯಾರ್ಥಿಯೋರ್ವೆಯನ್ನು ಚೆರ್ಕಳದಲ್ಲಿ ಪರಿಚಯಗೊಂಡಿದ್ದ ನೆನ್ನಲಾಗಿದೆ. ಅನಂತರ ಸಾಮಾಜಿಕ ತಾಣಗಳಲ್ಲಿ ಗೆಳತನ ಮುಂದುವರಿಸಿದ್ದರು. ಈ ಮಧ್ಯೆ ಶಿಹಾಬ್ ಬಾಲಕಿಯ ಮನೆಗೆ ಎರಡು ಬಾರಿ ತೆರಳಿ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ. ಇದರಿಂದ ಆಕೆ ಗರ್ಭಿಣಿಯಾಗಿದ್ದಳು. ಇತ್ತೀಚೆಗೆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ತಪಾಸಣೆ ಗೊಳಪಡಿಸಿದಾಗಲೇ ವಿಷಯ ಅರಿವಿಗೆ ಬಂದಿದೆ. ಬಳಿಕ ನಡೆಸಿದ ತನಿಖೆ ವೇಳೆ ಬಾಲಕಿ ಕಿರುಕುಳ ನೀಡಿದಾತನ ಮಾಹಿತಿ ನೀಡಿದ್ದಳು. ಇದರಂತೆ ಶಿಹಾಬ್ ವಿರುದ್ಧ ಕೇಸು ದಾಖಲಿಸಲಾಗಿದೆ.