ಮಗಳ ಮನೆಗೆ ಹೋದ ವ್ಯಕ್ತಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಮಗಳ ಮನೆಗೆ ಹೋದ ವ್ಯಕ್ತಿ ಹೃದಯಾಘಾತದಿಂದ ನಿಧನಹೊಂದಿದರು.

ಬೆದ್ರಡ್ಕ ಬಳಿಯ ದೇಶಮಂಗಲ ನಿವಾಸಿ ಸುರೇಂದ್ರ (60) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಆದಿತ್ಯವಾರ ಉಪ್ಪಳ ಕೋಡಿಬೈಲಿನಲ್ಲಿರುವ ಮಗಳ ಮನೆಗೆ ಹೋಗಿದ್ದರು. ಅಲ್ಲಿಂದ ಸಂಜೆ ಹೊರಡುತ್ತಿದ್ದಂತೆ  ಉಸಿರಾಟ ತೊಂದರೆ ಅನುಭವಗೊಂಡಿತ್ತೆನ್ನ ಲಾಗಿದೆ. ಕೂಡಲೇ ಅವರನ್ನು ಮಂಗಲ್ಪಾಡಿ ತಾಲೂಕು  ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಕುಳಿತಿದ್ದಾಗ  ಕುಸಿದು ಬಿದ್ದು ಮೃತಪಟ್ಟರ. ಹೃದಯಾ ಘಾತದಿಂದ ಸಾವು ಸಂಭವಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆನ್ನಲಾಗಿದೆ.  ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಸಾವಿನ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ಪತ್ನಿ ಸುಂದರಿ, ಮಕ್ಕಳಾದ ನಳಿನಿ, ಶಾಲಿನಿ, ಸಂತೋಷ್, ಸಹೋದರ ಬಾಬು, ಸಹೋದರಿ ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ತನಿಯಪ್ಪ, ಸಹೋದರಿ ಕಮಲ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page