ಮಧ್ಯವಯಸ್ಕ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಮಧ್ಯವಯಸ್ಕ ನೋರ್ವ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದ ಮಲಾರ್‌ಕೋಡಿ ನಿವಾಸಿ ದಿ| ತಿಮ್ಮಪ್ಪ ನಾಯ್ಕರ ಪುತ್ರ ಶಿವಪ್ಪ ನಾಯ್ಕ (45) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಪಾತೂರು ಗ್ರಾಮದ ಮಲಾರ್ ಹೊಳೆಯಲ್ಲಿ ನಿನ್ನೆ ಸಂಜೆ 4 ಗಂಟೆಗೆ ಮೃತದೇಹ ಕಂಡುಬಂದಿದೆ. ವಿಷಯ ತಿಳಿದು ಮಂಜೇಶ್ವರ ಪೊಲೀಸರು ಹಾಗೂ ಸ್ಥಳೀಯರು ತಲುಪಿ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಕೂಲಿ ಕಾರ್ಮಿಕನಾದ ಶಿವಪ್ಪ ನಾಯ್ಕ ಕೆಲವು ಕಾಲದಿಂದ ಏಕಾಂಗಿಯಾಗಿ ವಾಸಿಸುತ್ತಿ ದ್ದರೆನ್ನ ಲಾಗಿದೆ. ಅಪಸ್ಮಾರ ರೋಗಿಯೂ ಆಗಿದ್ದರೆಂದು ಹೇಳಲಾಗುತ್ತಿದೆ.

ಮೃತರು ತಾಯಿ ಲಕ್ಷ್ಮಿ, ಸಹೋದರ ನಾರಾಯಣ (ಪೈವಳಿಕೆ  ಚಂದ್ರಿಕಗುಡ್ಡೆ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಸುಂದರಿ ಈ ಹಿಂದೆ ನಿಧನಹೊಂದಿದ್ದಾರೆ.

RELATED NEWS

You cannot copy contents of this page