ಮೀಂಜ ಬಿಜೆಪಿ ವತಿಯಿಂದ ಪಿ.ವಿ. ಭಟ್ ಸಂಸ್ಮರಣೆ

ಮೀಂಜ: ಮೀಂಜ ಪಂಚಾಯತ್ ಬಿಜೆಪಿ ಸಮಿತಿ ವತಿಯಿಂದ ಮೀಂಜ ದಲ್ಲಿ ಪಿ.ವಿ. ಭಟ್ ಸಂಸ್ಮರಣೆ ಜರಗಿತು. ಬಿಜೆಪಿ ಮಂಡಲ ಮಾಜಿ ಪ್ರಧಾನ ಕಾರ್ಯ ದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದ ಇವರು ಇಂದಿನ ನಾಯಕರಿಗೆ ಮಾದರಿ ಎಂದು ಬಿಜೆಪಿ ಮುಖಂಡ ವಿಜಯ ರೈ ಹೇಳಿದರು.  ನಿನ್ನೆ ಸಂಜೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಸ್ಮರಣೆ ಸಭೆ ಜರಗಿದೆ. ಮೀಂಜ ಪಂಚಾಯತ್ ಸಮಿತಿ ಅಧ್ಯಕ್ಷ ಬೆಜ್ಜ ಚಂದ್ರಹಾಸ, ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ಹರೀಶ್ಚಂದ್ರ ಮಂಜೇ ಶ್ವರ, ತಿಮ್ಮಪ್ಪ ಮೀಯಪದವು, ಶುಭಾ ನಂದ ಶೆಟ್ಟಿ, ಕೆ.ವಿ. ಭಟ್, ಮಂಜುನಾಥ ಭಂಡಾರಿ ಮಾತನಾಡಿದರು.

You cannot copy contents of this page