ರಸ್ತೆಯಲ್ಲಿ ಕೆಟ್ಟು ನಿಂತ ಕಾರು: ಸಂಚಾರಕ್ಕೆ ತಡೆ

ಉಪ್ಪಳ: ಕೈಕಂಬ ಪೇಟೆಯ ಸರ್ವೀಸ್ ರಸ್ತೆಯಲ್ಲಿ ಕಾರು ಕೆಟ್ಟು ನಿಂತು ಮುಕ್ಕಾಲು ಗಂಟೆ ಕಾಲ ರಸ್ತೆ ತಡೆ ಉಂಟಾಗಿ ಸಾರ್ವಜನಿಕರು ಸಂಕಷ್ಟಕ್ಕೀಡಾದ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ. ಉಪ್ಪಳ ಭಾಗದಿಂದ ಕಾಸರಗೋಡಿನತ್ತ ಸಂಚರಿಸುತ್ತಿದ್ದ ಕಾರು ಸರ್ವೀಸ್ ರಸ್ತೆ  ಮಧ್ಯೆ ಕೆಟ್ಟು ನಿಂತಿದ್ದು, ಇದರಿಂದಾಗಿ ಇತರ ವಾಹನಗಳಿಗೆ ಸಂಚರಿಸಲು ತಡೆ ಉಂಟಾಯಿತು. ಬಳಿಕ ಕ್ರೈನ್ ತರಿಸಿ ಕಾರನ್ನು ತೆರವುಗೊಳಿಸಿದ ಬಳಿಕ ಸಂಚಾರ ಸುಗಮಗೊಂಡಿದೆ.

RELATED NEWS

You cannot copy contents of this page