ರಾಜ್ಯ ಶಾಲಾ ಕಲೋತ್ಸವ ನಾಳೆಯಿಂದ

ಕೊಲ್ಲಂ: ರಾಜ್ಯ ಶಾಲಾ ಕಲೋತ್ಸವಕ್ಕಾಗಿ ಕೊಲ್ಲಂ ನಗರ ಸಿದ್ಧಗೊಂಡಿದೆ. ೨೪ ವೇದಿಕೆಗಳಲ್ಲಾಗಿ ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗಗಳ ೨೩೯ ವಿಭಾಗ ಸ್ಪರ್ಧೆಗಳಲ್ಲಿ ೧೪ ಸಾವಿರ  ಪ್ರತಿಭೆಗಳು ಭಾಗವಹಿಸುವರು. ನಾಳೆ ಬೆಳಿಗ್ಗೆ ೧೦ ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೀಪ ಬೆಳಗಿಸುವರು.  ಅತ್ಯಂತ ಹೆಚ್ಚು ಅಂಕಗಳನ್ನು ಪಡೆಯುವ ಜಿಲ್ಲೆಗೆ ನೀಡುವ ಚಿನ್ನದ ಕಪ್‌ನ್ನು ಇಂದು ಮಧ್ಯಾಹ್ನ  ಕುಳಕ್ಕಡದಲ್ಲಿ ಸಚಿವರಾದ ಕೆ.ಎನ್. ಬಾಲಗೋಪಾಲ್, ಜೆ. ಚಿಂಜುರಾಣಿ, ಕೆ.ಬಿ. ಗಣೇಶ್ ಕುಮಾರ್ ಎಂಬಿವರು ಸ್ವೀಕರಿಸಿದರು. ನಿನ್ನೆ ಕಲ್ಲಿಕೋಟೆಯಿಂದ ಈ ಚಿನ್ನದ ಕಪ್‌ನ್ನು ಶೋಭಾಯಾತ್ರೆ ಮೂಲಕ ತರಲಾಗಿತ್ತು.

You cannot copy contents of this page