ಬದಿಯಡ್ಕ: ವ್ಯಾಪಾರಿಯೊಬ್ಬ ರನ್ನು ತಡೆದು ನಿಲ್ಲಿಸಿ ದರೋಡೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯನ್ನು 25 ವರ್ಷಗಳ ಬಳಿಕ ಸೆರೆಹಿಡಿಯಾಗಿದೆ.
ಕರ್ನಾಟಕದ ಮಡಿಕೇರಿ ಆಕತ್ತೂರಿನ ಅಬ್ಬಾಸ್ ಎಂಬಾತನನ್ನು ಬಂಧಿಸಲಾಗಿದೆ. ಈತ ೨೫ ವರ್ಷಗಳ ಹಿಂದೆ ಬೆದ್ರಂಪಳ್ಳದಲ್ಲಿ ವ್ಯಾಪಾರಿ ಯೊಬ್ಬರನ್ನು ತಡೆದುನಿಲ್ಲಿಸಿದ ಪ್ರಕರಣದ ಆರೋ ಪಿಯಾಗಿದ್ದಾನೆ. ಅಂದು ಈತ ನ್ಯಾಯಾಲಯದಲ್ಲಿ ಹಾಜರಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಬಳಿಕ ಹಾಜರಾಗದ ಈತನನ್ನು ತಲೆಮ ರೆಸಿಕೊಂಡ ಆರೋಪಿಯೆಂದು ಘೋಷಿಸಲಾಗಿತ್ತು. ಇದೀಗ ಬದಿಯಡ್ಕ ಎಸ್.ಐ ನೇತೃತ್ವದ ತಂಡ ಮಡಿಕೇರಿಯಿಂದ ಸೆರೆಹಿಡಿದಿದೆ.







