ಶಿರಿಯ ಬಳಿ ಆಟೋ ರಿಕ್ಷಾ-ಕಾರು ಢಿಕ್ಕಿ ಹೊಡೆದು 8 ಮಂದಿಗೆ ಗಾಯ


ಕುಂಬಳೆ: ಕುಂಬಳೆ-ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಿಯ ಮುಟ್ಟ ಬಳಿ ಆಟೋ ರಿಕ್ಷಾ ಹಾಗೂ ಕಾರು ಢಿಕ್ಕಿ ಹೊಡೆದು ಎಂಟು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ಆಟೋ ರಿಕ್ಷಾ ಪೂರ್ಣವಾಗಿ ಹಾನಿಗೊಂಡಿದೆ. ಆಟೋ ರಿಕ್ಷಾ ಪ್ರಯಾಣಿಕರಾದ ಶಿರಿಯಾದ ಶುಹೈಬ (30), ಮಕ್ಕಳಾದ ಜನ್ನ (5), ಅಯಾನ್ (3) ಎಂಬಿವರು ಹಾಗೂ ಶುಹೈಬ್ (21) ಎಂಬವರನ್ನು ಮಂಗಳೂರಿನ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಚೆರ್ವತ್ತೂರು ನಿವಾಸಿಗಳಾದ ವಿಲಾಸಿನಿ (59), ಉಣ್ಣಿಕೃಷ್ಣನ್ (63), ಸುರೇಶ್ಬಾಬು (43), ಸ್ಮೃತಿ (9) ಎಂಬಿವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖ ಲಿಸಲಾಗಿದೆ. ನಿನ್ನೆ ಮಧ್ಯಾಹ್ನ ವೇಳೆ ಈ ಅಪಘಾತ ಸಂಭವಿಸಿದೆ.

RELATED NEWS

You cannot copy contents of this page