ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ನಿಧನ

ಉಪ್ಪಳ: ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಮೂಲತ: ಅಡ್ಕ ವೀರನಗರ ನಿವಾಸಿಯೂ ಇದೀಗ ಪಂಜದಲ್ಲಿ ವಾಸವಾಗಿರುವ ದಿ| ಸಂಜೀವರವರ ಪುತ್ರ ಅಶೋಕ (45) ನಿಧನರಾದರು. ಎರಡು ತಿಂಗಳಿAದ ತಲೆಯ ನರಕ್ಕೆ ಸಂಬAಧಿಸಿದ ಅಸೌಖ್ಯಕ್ಕೆ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಬೆಳಿಗ್ಗೆ ನಿಧನರಾದರು. ಕುಬಣೂರು ವಿದ್ಯಾನಗರದಲ್ಲಿ ವ್ಯಾಪಾರಿಯಾಗಿದ್ದಾರೆ. ಮೃತರು ತಾಯಿ ನಾರಾಯಣಿ, ಪತ್ನಿ ಸುಜಾತ, ಮಕ್ಕಳಾದ ರಿತಿಕ್, ರಿತಿಕ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಚೆರುಗೋಳಿ ರುದ್ರ ಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಯಿತು. ಮೃತರ ಮನೆಗೆ ಬಿಜೆಪಿ ಮುಂಖAಡರಾದ ನ್ಯಾಯವಾದಿ ಕೆ.ಶ್ರೀಕಾಂತ್, ವಿಜಯ ಕುಮಾರ್ ರೈ, ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ವೀರಪ್ಪ ಅಂಬಾರು, ಪಿ.ಆರ್ ಸುನಿಲ್ ನಾರಂಪಾಡಿ ಹಾಗೂ ವಿಶ್ವಹಿಂದೂ ಪರಿಷತ್, ಬಜರಂಗದಳ ಮುಖಂಡರು, ಕಾರ್ಯಕರ್ತರು, ಹಿತೈಷಿಗಳ ಸಹಿತ ನೂರರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ನಿಧನಕ್ಕೆ ಜನನಿ ಆರ್ಟ್್ಸ ಎಂಡ್ ಸ್ಪೋರ್ಟ್್ಸ ಕ್ಲಬ್ ಅಡ್ಕ ವೀರನಗರ ಸಂತಾಪ ಸೂಚಿಸಿದೆ.

RELATED NEWS

You cannot copy contents of this page