ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ

ಬದಿಯಡ್ಕ: ಸನಾತನ ಧರ್ಮದ ಮಹತ್ವವನ್ನರಿತು ಮುಂದುವರಿಯುವ ಪ್ರಜೆಗಳು ಬೆಳೆದು ಬರಬೇಕು. ಬಾಲ್ಯದಲ್ಲಿಯೇ ಮಕ್ಕಳನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದ ರಿಂದ ಅವರು ಉತ್ತಮ ಚಿಂತನೆ ಗಳನ್ನು ಹೊಂದಲು ಸಾಧ್ಯವಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅಗಲ್ಪಾಡಿ ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಸಹಸ್ರಚಂಡಿಕಾಯಾಗದ ಪೂರ್ವ ಭಾವಿಯಾಗಿ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ದಿಂದ ಆರಂಭವಾದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ದೀಪ ಬೆಳಗಿಸಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ದೇಗುಲಕ್ಕೇ ಭೇಟಿ ನೀಡುವುದರಿಂದ ನಮ್ಮ ಸಂಸ್ಕಾರ, ಶಕ್ತಿ ವೃದ್ಧಿಯಾಗುತ್ತದೆ. ಅದು ನಮ್ಮ ಇಡೀ ಕುಟುಂಬವನ್ನು ಏಳಿಗೆಯತ್ತ ಕೊಂಡೊಯ್ಯುತ್ತದೆ. ಸಮಾಜಕ್ಕಾಗಿ ಮಾಡುವ ತ್ಯಾಗಕ್ಕೆ ಅತೀ ಮಹತ್ವವಿದೆ ಎಂದರು.
ಅಗಲ್ಪಾಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಅನಂತಗೋವಿAದ ಶರ್ಮ ಕೋಳಿಕ್ಕಜೆ, ಶ್ರೀಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ, ಹಸಿರುವಾಣಿ ಹೊರೆಕಾಣಿಕೆ ಸಮಿತಿ ಸಂಚಾಲಕ ಸುಧಾಮ ಪದ್ಮಾರು ಉಪಸ್ಥಿತರಿದ್ದರು. ರಮೇಶಕೃಷ್ಣ ಪದ್ಮಾರು ಸ್ವಾಗತಿಸಿ, ಪ್ರಚಾರಸಮಿತಿ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಿAದ ಆರಂಭವಾದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಮಾರ್ಪನಡ್ಕದಲ್ಲಿ ಸಂಗಮಿಸಿ ರಾತ್ರಿ ಶ್ರೀಕ್ಷೇತ್ರಕ್ಕೆ ತಲುಪಿತು.
ಹೊರೆಕಾಣಿಕೆ ಮೆರವಣಿಗೆಯ ಲ್ಲಿ ತುಳುನಾಡಿನ ವಿವಿಧ ಕಲಾಪ್ರಾಕಾ ರಗಳಾದ ಮುತ್ತುಕೊಡೆ, ಚೆಂಡೆ, ಕುಣಿತ ಭಜನೆ, ನೃತ್ಯ, ಬೊಂಬೆಯಾಟ, ಗೀತೋಪದೇಶದ ರಥ, ಕೀಲುಕುದುರೆ ನೃತ್ಯಗಳ ಸಹಿತ ಸಂಘಸAಸ್ಥೆಗಳು, ಧಾರ್ಮಿಕ ಕೇಂದ್ರಗಳು, ಊರ ಪರವೂರ ಭಕ್ತರು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page