ಅಧಿಕೃತ ಕಾರ್ಯಕ್ರಮಗಳಲ್ಲಿ ತ್ಯಾಜ್ಯಮುಕ್ತ ಪ್ರತಿಜ್ಞೆ
ತಿರುವನಂತಪುರ: ತ್ಯಾಜ್ಯಮುಕ್ತ ನವಕೇರಳಂ ಯೋಜನೆ ಅಂಗವಾಗಿ ಇಂದಿನಿಂದ ಎಲ್ಲಾ ಅಧಿಕೃತ ಕಾರ್ಯ ಕ್ರಮಗಳನ್ನು ತ್ಯಾಜ್ಯಮುಕ್ತ ಪ್ರತಿಜ್ಞೆಯೊಂದಿಗೆ ಆರಂಭಿಸುವಂತೆ ಸರಕಾರ ನಿರ್ದೇಶ ಹೊರಡಿಸಿದೆ. ಇದಕ್ಕೆ ಇಂದು ಎರ್ನಾಕುಳಂ ಜನರಲ್ ಆಸ್ಪತ್ರೆಯ ಕ್ಯಾನ್ಸರ್ ಬ್ಲೋಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಪ್ರತಿಜ್ಞೆ ನುಡಿದು ಚಾಲನೆ ನೀಡಲಿದ್ದಾರೆ. ತ್ಯಾಜ್ಯ ನಿರ್ಮೂಲನೆಯ ಎರಡನೇ ಹಂತದ ಕಾರ್ಯಕ್ರಮಗಳೂ ಇಂದು ಆರಂಭಗೊಂಡಿದೆ.