ಅಸೌಖ್ಯ: ಕಾಲೇಜು ವಿದ್ಯಾರ್ಥಿನಿ ನಿಧನ

ಉಪ್ಪಳ: ಕರುಳು ಸಂಬಂಧ ಅಸೌಖ್ಯದಿಂದ ಕಾಲೇಜು ವಿದ್ಯಾ ರ್ಥಿನಿ ನಿಧನಹೊಂದಿದ್ದಾಳೆ. ಮೂಲ ತಃ ಸೋಂಕಾಲು  ಬಳಿಯ ಕೊಡಂಗೆ ನಿವಾಸಿ, ಪ್ರಸ್ತುತ ಕರ್ನಾಟಕ ಕೋಟೆ ಕಾರಿನಲ್ಲಿ ವಾಸವಾಗಿರುವ ಇಂಚರ (16) ನಿಧನಹೊಂದಿದಳು. ಸೋಂಕಾಲಿನಲ್ಲಿ ಹಿರಿಯ ವ್ಯಾಪಾರಿ ಹಾಗೂ ಕಾರವಲ್ ಪತ್ರಿಕೆಯ ಏಜೆಂಟ್ ಆಗಿರುವ ಹರೀಶದಾಸ್‌ರ ಪುತ್ರಿ ನಿನ್ನೆ ಮಧ್ಯಾಹ್ನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂ ದಿದಳು. ಉಳ್ಳಾಲ ಪರಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ ಈಕೆ ಕರುಳು ಸಂಬಂಧ ಅಸೌಖ್ಯದಿಂದ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯು ತ್ತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ನಿಧನಹೊಂದಿದ್ದಾಳೆ.

ಮೃತಳು ತಂದೆ, ತಾಯಿ ಚೈತ್ರ, ಸಹೋದರಿ ಸೃಷ್ಟಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾಳೆ. ಅಂತ್ಯಸಂಸ್ಕಾರ ನಿನ್ನೆ ಸಂಜೆ ಮಾಡೂರು ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು.

RELATED NEWS

You cannot copy contents of this page