ಆಟೋ ರಿಕ್ಷಾ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಆಟೋ ರಿಕ್ಷಾವೊಂದು ಬೆಂಕಿ ತಗಲಿ ಕರಕಲುಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸಂಭವಿಸಿದೆ.
ಕಾಸರಗೋಡು ನೆಲ್ಲಿಕುಂಜೆ ಚೇರಂಗೈಯ ಸಾದಿಕ್ ಎಂಬವರ ಆಟೋ ರಿಕ್ಷಾ ಅವರ ಕ್ವಾರ್ಟರ್ಸ್‌ನ ಮುಂದೆ ಇಂದು ಬೆಳಿಗ್ಗೆ ಬೆಂಕಿಗಾಹುತಿಯಾಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ನಿನ್ನೆ ರಾತ್ರಿ ತಮ್ಮ ಕ್ವಾರ್ಟರ್ಸ್ ಮುಂದೆ ಆಟೋ ರಿಕ್ಷಾ ನಿಲ್ಲಿಸಿದ್ದರು. ಬೆಂಕಿ ಹೇಗೆ ತಗಲಿದೆಯೆಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಕಿಚ್ಚಿರಿಸಲಾಗಿ ದೆಯೋ ಎಂಬ ಶಂಕೆಯೂ ಉಂಟಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.