ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ನಿರ್ಣಾಯಕ ಪುರಾವೆ ಸಂಗ್ರಹಿಸಿದ ಕ್ರೈಂಬ್ರಾಂಚ್ ರಿಮಾಂಡ್‌ನಲ್ಲಿರುವ ಆರೋಪಿ ಮನೆಯಿಂದ ಡೈರಿ ಪತ್ತೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಮಹತ್ವದ ಸಂಗತಿ ಜಿಲ್ಲಾ ಕ್ರೈಂಬ್ರಾಂಚ್ ತಂಡಕ್ಕೆ ಲಭಿಸಿದೆ.

ವಂಚನೆ ಪ್ರಕರಣದಲ್ಲಿ ಆರೋಪಿಯಾದ ಕಾಞಂಗಾಡ್ ಅದಿಯಂಬೂರು ನಿವಾಸಿಯೂ ಈಗ ರಿಮಾಂಡ್‌ನಲ್ಲಿರುವ ಅನಿಲ್ ಕುಮಾರ್ ಎಂಬಾತನ ಮನೆಯಲ್ಲಿ ನಡೆಸಿದ ತಪಾ ಸಣೆ ವೇಳೆ ಡೈರಿಯೊಂದು ಪತ್ತೆಹಚ್ಚಿದೆ. ಪ್ರಕರಣದಲ್ಲಿ ಆರೋಪಿಗಳಾದ ಸೊಸೈ ಟಿಯ  ಸೆಕ್ರಟರಿಯಾಗಿದ್ದ ಕರ್ಮಂ ತೋಡಿ ಬಾಳಕಂಡಂ ಕೆ. ರತೀಶನ್, ಕಣ್ಣೂರು ಚೊವ್ವ ನಿವಾಸಿಯೂ, ಪ್ರಸ್ತುತ ಪಯ್ಯನ್ನೂರಿನಲ್ಲಿ ವಾಸಿಸುವ ಅಬ್ದುಲ್ ಜಬ್ಬಾರ್ ಯಾನೆ ಮಂಞಕಂಡಿ ಜಬ್ಬಾರ್ ಎಂಬವರೊಂದಿಗೆ ಅನಿಲ್ ಕುಮಾರ್ ನಡೆಸಿದ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಗಳು ಡೈರಿಯಲ್ಲಿ ಬರೆದಿಡಲಾಗಿದೆ ಎಂದು ಸೂಚನೆಯಿದೆ. ರತೀಶನ್ ಅನಿಲ್ ಕುಮಾರ್‌ಗೆ ನೀಡಿದ ಎಲ್ಲಾ ಚಿನ್ನಾಭರಣಗಳು, ಅವುಗಳ ತೂಕ, ದಿನಾಂಕ ಮೊದಲಾದವುಗಳನ್ನು ಡೈರಿಯಲ್ಲಿ ದಾಖಲಿಸಲಾಗಿದೆ. ಅಡವಿರಿಸಿದ ಆಭರಣಗಳ ಸ್ಲಿಪ್‌ಗಳನ್ನು ಡೈರಿಯಿಂದ ಪತ್ತೆಹಚ್ಚಲಾಗಿದೆ. ಇವುಗಳನ್ನು ಪತ್ತೆಹಚ್ಚುವುದರೊಂದಿಗೆ ನಿರ್ಣಾಯಕ ಮಾಹಿತಿಗಳು ತನಿಖಾ ತಂಡಕ್ಕೆ ಲಭಿಸಿದೆ. ಮುಖ್ಯ ಆರೋಪಿಗಳನ್ನು ನಿನ್ನೆ ಬೆಳಿಗ್ಗೆ ಮುಳ್ಳೇರಿಯದಲ್ಲಿರುವ ಸೊಸೈಟಿಗೆ ತಲುಪಿಸಿ ಮಾಹಿತಿ ಸಂಗ್ರಹಿಸ ಲಾಯಿತು. ರಿಮಾಂಡ್‌ನಲ್ಲಿದ್ದ ಮುಖ್ಯ ಆರೋಪಿಗಳಾದ ಜಬ್ಬಾರ್, ರಮೇಶನ್, ಕಲ್ಲಿಕೋಟೆ ನಿವಾಸಿ ನಬೀಲ್ ಎಂಬಿವರನ್ನು ಮೂರು ದಿನಗಳ ಕಾಲಕ್ಕೆ ಜಿಲ್ಲಾ ಕ್ರೈಂಬ್ರಾಂಚ್ ಕಸ್ಟಡಿಗೆ ತೆಗೆದುಕೊಂಡಿತ್ತು.

Leave a Reply

Your email address will not be published. Required fields are marked *

You cannot copy content of this page