ಕಾಸರಗೋಡು ಮಾರ್ಕೆಟ್‌ನಲ್ಲಿ ರಾತ್ರಿ ವೇಳೆ ಕುಸಿದು ಬಿದ್ದ ಹಳೆ ಕಾಂಕ್ರೀಟ್ ಕಟ್ಟಡ

ಕಾಸರಗೋಡು: ಕಾಸರಗೋಡು ಮೀನು ಮಾರ್ಕೆಟ್‌ನ ಹಳೆ ಕಟ್ಟಡ ರಾತ್ರಿ ಭಾರೀ ಮಳೆಗೆ  ಕುಸಿದು ಬಿದ್ದಿದೆ.  ರಾತ್ರಿ ಕುಸಿದು ಬಿದ್ದ ಕಾರಣದಿಂದಾಗಿ ಸಂಭಾವ್ಯ ಭಾರೀ ದೊಡ್ಡ ದುರಂತವೊಂದು ಅದೃಷ್ಟವಶಾತ್ ತಪ್ಪಿಹೋಗಿದೆ.

ಈ ಮಾರುಕಟ್ಟೆಯ ಹಳೆ ಕಟ್ಟಡದ ಕಾಂಕ್ರೀಟ್ ಮೇಲ್ಛಾವಣಿ ಹಾಗೂ ಕಂಬಗಳು ಇತ್ತೀಚೆಗಿನಿಂದ ಬಿರುಕು ಬಿಡಲಾರಂಭಿಸಿತ್ತು. ಮಾತ್ರವಲ್ಲ ಇದರ ಸಿಮೆಂಟ್ ಪಾಳಿಗಳು ಪದೇ ಪದ ಕುಸಿದು ಬೀಳತೊಡಗಿತ್ತು. ಇದರಿಂದಾಗಿ ಈ ಕಟ್ಟಡ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಆದರೆ ಆ ಕಟ್ಟಡದಲ್ಲಿ ವ್ಯಾಪಾರ ನಡೆಸುವವರು ಅದನ್ನು ತೆರವುಗೊಳಿಸದೆ ಅಲ್ಲೇ ವ್ಯಾಪಾರ ಮುಂದುವರಿಸುತ್ತಿದ್ದರು. ಹೆಚ್ಚಾಗಿ ಒಣಮೀನು ಮಾರಾಟದಂಗಡಿಗಳೇ ಈ ಕಟ್ಟಡದಲ್ಲಿ ಕಾರ್ಯವೆಸಗುತ್ತಿದ್ದು ಮೊನ್ನೆ ತಡರಾತ್ರಿ ಭಾರೀ ಮಳೆಗೆ ಈ ಕಟ್ಟಡಗಳು ಕುಸಿದುಬಿದ್ದಿವೆ. ರಾತ್ರಿಯಾದುದರಿಂದ ಅಂಗಡಿಗಳೆಲ್ಲಾ ಮುಚ್ಚಲ್ಪಟ್ಟಿತ್ತು. ಅದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾಸರಗೋಡು ನಗರಸಭೆಯ ಅಧಿಕಾರಿಗಳು ಮತ್ತು ಅಧ್ಯಕ್ಷರು ನಿನ್ನೆ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಸಿದು ಬಿದ್ದ ಕಟ್ಟಡಗಳು ಅವಶೇಷಗಳನ್ನು ಬಳಿಕ ಜೆಸಿಬಿ ಬಳಸಿ ಅಲ್ಲಿಂದ ತೆರವುಗೊಳಿಸಲಾಯಿತು.

You cannot copy contents of this page