ಡೆಂಗ್ಯೂ ಜ್ವರ: ನಗರದ ಖ್ಯಾತ ವೈದ್ಯ ಡಾ| ಬಾಲಗೋಪಾಲನ್ ನಾಯರ್ ಮೃತ್ಯು
ಕಾಸರಗೋಡು: ಕಾಸರಗೋಡು ನಗರದ ಖ್ಯಾತ ವೈದ್ಯ ಡಾ| ಕೆ. ಬಾಲಗೋಪಾಲನ್ ನಾಯರ್ (75) ಡೆಂಗ್ಯೂ ಜ್ವರಬಾಧಿಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಜ್ವರ ಬಾಧಿಸಿದ್ದ ಇವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಕಾಸರಗೋಡು ನಗರದ ಬ್ಯಾಂಕ್ ರೋಡ್ನಲ್ಲಿ ಕಳಕ್ಕರ ಹೌಸ್ ನಿವಾಸಿಯಾದ ಡಾ| ಬಾಲ ಗೋಪಾಲನ್ ನಾಯರ್ ಮನೆ ಸಮೀಪದಲ್ಲೇ ಕಳೆದ ೪೫ ವರ್ಷಗಳಿಂದ ಶ್ರೀಕೃಷ್ಣ ಕ್ಲಿನಿಕ್ ನಡೆಸುತ್ತಿದ್ದರು. ಕಾಸರಗೋಡು ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು.
ಮೃತದೇಹದ ಅಂತ್ಯಸಂಸ್ಕಾರ ಕುತ್ತಿಕ್ಕೋಲ್ ಕಳಕ್ಕರದ ಸ್ಮಶಾನದಲ್ಲಿ ನಡೆಯಲಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತರು ಸಹೋದರ-ಸಹೋದ ರಿಯರಾದ ಕೆ.ಕೆ. ನಾಯರ್, ಲೀಲಾವತಿ ಕೆ. ನಾಯರ್ (ಪ್ರಾಂಶು ಪಾಲರು, ಬಾಲಭವನ ಆಂಗ್ಲಮಾ ಧ್ಯಮ ಶಾಲೆ), ಡಾ. ಕುಸುಮಾ ಕೆ. ನಾಯರ್ (ಮಂಗಳೂರು)ಸ ವೇಣುಗೋಪಾಲನ್ ನಾಯರ್ (ಚಾತಕುಟ್ಟಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಇವರ ಇನ್ನೋರ್ವ ಸಹೋ ದರ ಕರುಣಾಕರನ್ ನಾಯರ್ ಈ ಹಿಂದೆ ನಿಧನಹೊಂದಿದ್ದಾರೆ.