ಪೋಕ್ಸೋ ಪ್ರಕರಣ : ಆಟೋ ಚಾಲಕ ಸೆರೆ
ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾದ ಆಟೋ ರಿಕ್ಷಾ ಚಾಲಕನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಪಿಲಿಕ್ಕೋಡು ಮಟ್ಟಲಾಯಿ ನಿವಾಸಿ ಚೆರ್ವತ್ತೂರು ಆಟೋ ಸ್ಟ್ಯಾಂಡ್‌ನ ಕೆ.ಆರ್. ಅಜೆಯನ್ (೪೫) ಬಂಧಿತನಾದ ಆರೋಪಿ. ಚಂದೇರಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಪಿ. ಮನುರಾಜ್ ನೇತತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಎಪ್ರಿಲ್ ೧೧ರಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಅಜೆಯನ್ ವಿರುದ್ಧ ಚಂದೇರಾ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು.