ಭಾರತ ವಿಶ್ವದ ಅತೀ ದೊಡ್ಡ ತೃತೀಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ- ಕೇಂದ್ರ ಸಚಿವೆ ಸ್ಮೃತಿ ಇರಾನಿ

ಹೊಸದುರ್ಗ: ನರೇಂದ್ರ ಮೋದಿ ಸರಕಾರ ಆಡಳಿತದಲ್ಲಿ ಭಾರತ ವಿಶ್ವದ ಅತೀ ದೊಡ್ಡ ತೃತೀಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಮಹಿಳಾ- ಶಿಶು ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಹೊಸದುರ್ಗದಲ್ಲಿ ನಿನ್ನೆ ನಡೆದ ಎನ್‌ಡಿಎ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಸವಾಲೊಡ್ಡುತ್ತಿರುವವರಲ್ಲಿ, ಅವರ ನೇತಾರ ಯಾರು, ಅವರ ಕಾರ್ಯಯೋಜನೆಗಳಾದರೂ ಏನು ಎಂದು ಪ್ರಶ್ನಿಸಿದರೆ, ಅದಕ್ಕೆ ಯಾವುದೇ ಉತ್ತರ ಲಭಿಸದು. ಕೇರಳದಲ್ಲಿ  ಕಾಂಗ್ರೆಸ್ ಮತ್ತು ಸಿಪಿಎಂ ಪರಸ್ಪರ ಹೋರಾಟ ನಡೆಸಿದರೆ, ಕೇಂದ್ರ ಮಟ್ಟದಲ್ಲಿ ಆ ಎರಡು ಪಕ್ಷಗಳು ಪರಸ್ಪರ ಅಪ್ಪಿಕೊಳ್ಳುತ್ತಿದೆ. ಕೇಂದ್ರದಲ್ಲಿ ಮೋದಿ ಸರಕಾರ ಸಹಕಾರಿ ಸಚಿವಾಲಯಕ್ಕೆ ರೂಪು ನೀಡಿದರೆ, ಕೇರಳದಲ್ಲಿ ಸಹಕಾರಿ ಬ್ಯಾಂಕ್‌ಗಳ ಲೂಟಿ ನಡೆಸಲಾಗುತ್ತಿದೆ. ಈಶಾನ್ಯ ಭಾರತದಲ್ಲಿ ದೇವಸ್ಥಾನಗಳಿಗೆ ನುಗ್ಗಿ ತಮ್ಮ ಪಕ್ಷದ ಪತಾಕೆ ಪ್ರದರ್ಶಿಸುತ್ತಿರುವ ಕಾಂಗ್ರೆಸ್  ನೇತಾರರು ವಯನಾಡಿನಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರು ಭಾಗವಹಿಸಿದ ರೋಡ್ ಶೋನಲ್ಲಿ ತಮ್ಮ  ಸ್ವಂತ ಪಕ್ಷದ ಪತಾಕೆಯನ್ನು ಪ್ರದರ್ಶಿಸಲೂ ಕಾಂಗೆಸ್ ಭಯಪಟ್ಟಿದೆ. ಅಂದರೆ ಏಕಾಂಗಿಯಾಗಿ ಚುನಾವಣೆ ಎದುರಿಸುವ ಭಯ ಕಾಂಗ್ರೆಸನ್ನು ಕಾಡುತ್ತಿದೆ ಎಂಬುವುದನ್ನು ಇದು ಎತ್ತಿ ತೋರಿಸುತ್ತಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ೪೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ರಾಹುಲ್ ಗಾಂಧಿ ವಯನಾಡಿಗೆ ಹೋಗಿ ಸ್ಪರ್ಧಿಸಲಿ ಎಂದು ಇಲ್ಲಿ ಹೇಳುತ್ತಿರುವ ಸಿಪಿಎಂ ಕೇಂದ್ರ ಮಟ್ಟದಲ್ಲಿ ಅದೇ ರಾಹುಲ್  ಗಾಂಧಿಯೊಂದಿಗೆ ಭಾಯ್ ಭಾಯ್ ಯಾಗಿ ಕಾರ್ಯವೆಸಗುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶವನ್ನು ಅಭಿವೃದ್ಧಿಯತ್ತ ಸಾಗಿಸುತ್ತಿರುವಾಗ, ವಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ದೇಶವನ್ನು ದರೋಡೆಗೈಯ್ಯಲೆತ್ನಿಸುತ್ತಿದೆ ಎಂದು ಸಚಿವೆ ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತದಲ್ಲಿದ್ದ ವೇಳೆ ಆ ಸರಕಾರ ಕೇರಳಕ್ಕೆ ನೀಡಿದ ಆರ್ಥಿಕ ನೆರವಿಗಿಂತ  ಆರು ಪಟ್ಟು ಹೆಚ್ಚು ಸಹಾಯ ಮೋದಿ ಸರಕಾರ ನೀಡಿದೆ. ಭಾರತದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ಮುಕ್ತ ದೇಶ ಎಂಬುವುದು ಎನ್‌ಡಿಎಯಿಂದ ಮಾತ್ರ ಸಾಧ್ಯವಾಗಲಿದೆ. ಆದ್ದರಿಂದ ಎನ್‌ಡಿಎಯನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿ ಎಂದು ಸಚಿವರು ಮತದಾರರೊಡನೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಚುನಾವಣಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಎಂ. ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬಿಡಿಜೆಎಸ್ ರಾಜ್ಯ ಕಾರ್ಯದರ್ಶಿ ಇ. ಮನೀಶ್, ಬಿಜೆಪಿ ನೇತಾರರಾದ ನ್ಯಾ. ಕೆ. ಶ್ರೀಕಾಂತ್, ಎನ್‌ಡಿಎ ಉಮೇ ದ್ವಾರೆ ಎಂ.ಎಲ್. ಅಶ್ವಿನಿ ಮಾತನಾಡಿ ದರು. ಎನ್‌ಡಿಎಯ ಹಲವು ನೇತಾರರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page