ಮೂವರು ಅಭ್ಯರ್ಥಿಗಳಿಂದ ದ್ವಿತೀಯ ಹಂತದ ಪರ್ಯಟನೆ: ಅಬ್ದುಲ್ಲ ಕುಟ್ಟಿ ನಾಳೆ ಮುಳ್ಳೇರಿಯದಲ್ಲಿ

ಕಾಸರಗೋಡು: ಪ್ರಥಮ ಹಂತದ  ಪ್ರಚಾರದಂಗವಾಗಿ ಅಭ್ಯರ್ಥಿ ಎಂ.ಎಲ್. ಅಶ್ವಿನಿಯ ಮಂಡಲ ಪರ್ಯಟನೆ ಪೂರ್ತಿಯಾ ಗುವುದರೊಂದಿಗೆ  ಎನ್‌ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರ ದಲ್ಲಿ ದ್ವಿತೀಯ ಹಂತದ ಪ್ರಚಾ ರಕ್ಕೆ ನಾಳೆ ಕಾಸರಗೋಡು ಮಂಡಲ ದಿಂದ ಚಾಲನೆ ನೀಡಲಾಗುವುದು.

ನಾಳೆ ಬೆಳಿಗ್ಗೆ ೮ಕ್ಕೆ ಮಧೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಉದ್ಘಾಟಿಸುವರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸುವರು. ಉತ್ತರ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದ ರ್ಶಿಗಳಾದ ಎ. ವೇಲಾಯುಧನ್, ವಿಜಯ ಕುಮಾರ್ ರೈ, ರಾಜ್ಯಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ಎನ್‌ಡಿಎ ಅಧ್ಯಕ್ಷ ಎಂ.ಎನ್. ನಾರಾಯಣ ಭಾಗವಹಿಸುವರು.

ಬಳಿಕ ಕೊಲ್ಲಂಗಾನ, ಚೇನಕ್ಕೋ ಡು, ಮಾಯಿಪ್ಪಾಡಿ, ಪೆರಿಯಡ್ಕ, ಭಗವತೀ ನಗರ್, ವಿವೇಕಾನಂದನಗರ್, ಮೀಪುಗುರಿಯಲ್ಲಿ ಸಭ ನಡೆಯಲಿದೆ.

ಅಪರಾಹ್ನ  ಚೆರ್ಕಳ, ಎಡನೀರು, ನೆಲ್ಲಿಕಟ್ಟೆ, ಮಾನ್ಯ, ನೀರ್ಚಾಲು, ನಾರಂಪಾಡಿ, ಮಾರ್ಪನಡ್ಕ, ಕಿನ್ನಿಂಗಾರು, ನಾಟೆಕಲ್ಲ್ಲು, ಗಾಡಿಗುಡ್ಡೆಯಲ್ಲಿ ಪ್ರಚಾರ ಬಳಿಕ ಸಂಜೆ ಮುಳ್ಳೇರಿಯದಲ್ಲಿ ಸಮಾಪ್ತಿಯಾಗಲಿದೆ. ಬಿಜೆಪಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲ ಕುಟ್ಟಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು.

ಐಕ್ಯರಂಗದ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್‌ರ ದ್ವಿತೀಯ ಹಂತದ ಚುನಾವಣೆ ಪರ್ಯಟನೆ ಕಾಞಂಗಾಡ್ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪಂಚಾಯತ್‌ಗಳಲ್ಲಿ ನಡೆ ಯಿತು. ಕಲ್ಲಪ್ಪಳ್ಳಿಯಲ್ಲಿ ನಿಧನಹೊಂದಿ ಕಾಂಗ್ರೆಸ್ ಮುಖಂಡ ಸೋಮನಾಥ ಗೌಡರ ಮನೆಗೆ ಸಂದರ್ಶಿಸಿ ಪುಷ್ಪಾರ್ಚನೆ ನಡೆಸಿದರು. ಪಾಣತ್ತೂರಿನಿಂದ ಆರಂಭ ಗೊಂಡ ಅಭ್ಯರ್ಥಿಯ ಪರ್ಯಟನೆ ಯನ್ನು ಬಷೀರ್ ವೆಳ್ಳಿಕ್ಕೋತ್ ಉದ್ಘಾಟಿಸಿದರು. ಇಂದು ತೃಕ್ಕರಿಪುರ ಮಂಡಲದಲ್ಲಿ ಪರ್ಯಟನೆ ನಡೆಸುವರು.

ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಕಲ್ಯಾಶ್ಶೇರಿ ಮಂಡಲದಲ್ಲಿ   ಪರ್ಯಟನೆ ನಡೆಸಿದರು. ಆಲಕ್ಕೋಡ್, ವಳ್ಳತ್ತೋಡ್ ವಾಚನಾಲಯಕ್ಕೆ ಸಮೀಪ ಪರ್ಯಟನೆ ನಡೆಸಿದರು. ಇಂದು ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಪರ್ಯಟನೆ ನಡೆಸುವರು.

Leave a Reply

Your email address will not be published. Required fields are marked *

You cannot copy content of this page