ರಾಜ್ಯ ಶಾಲಾ ಕಲೋತ್ಸವ: ಮೊದಲ ದಿನ ಕಲ್ಲಿಕೋಟೆ ಮುನ್ನಡೆ

ಕೊಲ್ಲಂ: ರಾಜ್ಯದಲ್ಲಿ ಶಾಲಾ ಕಲೋತ್ಸವದ ಮೊದಲ ದಿನದ ಸ್ಪರ್ಧೆಗಳು ನಿನ್ನೆ ಸಂಜೆ ಕೊನೆಗೊಂಡಾಗ ಅಂಕಗಳ ಆಧಾರದಲ್ಲಿ ಕಲ್ಲಿಕೋಟೆ ಜಿಲ್ಲೆ ಮುನ್ನಡೆಯಲ್ಲಿದೆ. ಕಲ್ಲಿಕೋಟೆಗೆ ೧೩೯ ಅಂಕಗಳು ಲಭಿಸಿದ್ದು, ೧೩೭ ಅಂಕಗಳೊಂದಿಗೆ ತೃಶೂರು ದ್ವಿತೀಯ ಸ್ಥಾನದಲ್ಲಿದೆ. ೧೩೨ ಅಂಕಗಳೊಂದಿಗೆ ಕಣ್ಣೂರು ತೃತೀಯ, ಆತಿಥೇಯವಾದ ಕೊಲ್ಲಂ ೧೨೬ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕೊಲ್ಲಂನ ಆಶ್ರಮಂ ಮೈದಾನದಲ್ಲಿರುವ ಪ್ರಧಾನ ವೇದಿಕೆಯಲ್ಲಿ ಕಲೋತ್ಸವವನ್ನು ನಿನ್ನೆ ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೀಪ ಬೆಳಗಿಸಿ ಉದ್ಘಾಟಿಸಿದ್ದಾರೆ. ನಿನ್ನೆ ೫೯ ಸ್ಪರ್ಧೆಗಳು ನಡೆದಿದೆ. ಐದು ದಿನಗಳ ಕಾಲ ನಡೆಯುವ ಕಲೋತ್ಸವದಲ್ಲಿ ೧೪ ಸಾವಿರದಷ್ಟು  ಮಕ್ಕಳು ಭಾಗವಹಿಸುವರು. ಸ್ಪರ್ಧಾಳುಗಳಿಗೆ ಕೊಲ್ಲಂ ನಗರದ ೨೩ ಶಾಲೆಗಳಲ್ಲಿ ವಾಸ ಸೌಕರ್ಯ ಏರ್ಪಡಿಸಲಾಗಿದೆ. ಮಕ್ಕಳನ್ನು ಆಯಾ ವೇದಿಕೆಗಳಿಗೆ ಹಾಗೂ ಅವರಿಗೆ ಆಹಾರ ತಲುಪಿಸಲು ೩೦ ಶಾಲಾ ಬಸ್‌ಗಳನ್ನು ಬಳಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page