ಲಕ್ಷಾಂತರ ರೂ. ಮೌಲ್ಯದ ತಂಬಾಕು ಉತ್ಪನ್ನ ವಶ: ಇಬ್ಬರ ಸೆರೆ

ಕಾಸರಗೋಡು: ಕರ್ನಾಟಕ ದಿಂದ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ ಲಕ್ಷಾಂತರ ರೂ. ಬೆಲೆಯ ೨೬,೮೬೫ ಪ್ಯಾಕೇಟ್ ತಂಬಾಕು ಉತ್ಪನ್ನವನ್ನು ನೀಲೇಶ್ವರದಿಂದ ವಾಹನ ತಪಾಸಣೆ ವೇಳೆ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಆ ಕಾರಿನಲ್ಲಿದ್ದ ಕಾಸರಗೋಡು ಚೆಟ್ಟುಂಗುಳಿ ನಿವಾಸಿಗಳಾದ  ಮೊಹಮ್ಮದ್ ಅಸರುದ್ದೀನ್ (೨೭) ಮತ್ತು ನಾಸಿಂ (೨೯) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page