ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ನೇಣುಬಿಗಿದು ಮೃತ್ಯು

ಕಾಸರಗೋಡು: ಸಿಪಿಎಂನ ಅಂಬಲತ್ತರ ಗ್ರಾಮದ ಕಣಿಚ್ಚಿರ ಬ್ರಾಂಚ್ ಕಾರ್ಯದರ್ಶಿ, ಮಡಿಕೈ ಕುಂಡಯಂವಯಲ್ ನಿವಾಸಿ ಕೆ.ವಿ. ಕುಂಞಂಬು (೫೦) ಎಂಬವರು ನಿನ್ನೆ ಸಂಜೆ ಮನೆ ಪಕ್ಕದ ಕಮ್ಯೂನಿಟಿ ಹಾಲ್‌ನ ಕಿಟಿಕಿಯ ಸರಳಿನಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿಕನಾಗಿರುವ ಕುಂಞಂಬು  ನಾರ್ಕಳ-ಮಾಣಿಕುತ್ತಿ ದಂಪತಿಯ ಪುತ್ರನಾಗಿದ್ದಾರೆ.  ಮೃತರು ಪತ್ನಿ ಸತ್ಯಭಾಮ, ಮಕ್ಕಳಾದ ಮಿಥುನ, ಮಿಥುನ್‌ರಾಜ್, ಸಹೋದರ-ಸಹೋದರಿಯರಾದ ಬಾಲಕೃಷನ್, ಕೆ.ವಿ. ಪ್ರಮೋದ್ (ಮಡಿಕೈ ಪಂಚಾಯತ್ ಸದಸ್ಯ), ಲಕ್ಷ್ಮಿ, ನಾರಾಯಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page