ನಾಮಪತ್ರ ಸಲ್ಲಿಕೆಗಿರುವ ಟೋಕನ್ ಹೆಸರಲ್ಲಿ ತರ್ಕ: ಕಲೆಕ್ಟರೇಟ್‌ನಲ್ಲಿ ಕುಳಿತು ಪ್ರತಿಭಟಿಸಿದ ಉಣ್ಣಿತ್ತಾನ್

ಕಾಸರಗೋಡು:  ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ನೀಡಲಾಗುವ ಟೋಕನ್ ವಿಷಯದಲ್ಲಿ ತರ್ಕವುಂಟಾಗಿದ್ದು, ಇದರಿಂದ ಯುಡಿಎಫ್ ಅಭ್ಯರ್ಥಿ  ರಾಜ್‌ಮೋಹನ್ ಉಣ್ಣಿತ್ತಾನ್  ಕಲೆಕ್ಟರೇಟ್‌ನ ನೆಲದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.  ನಾಮಪತ್ರ ಸಲ್ಲಿಸಲು ಟೋಕನ್ ಪಡೆಯಲು ಇಂದು ಬೆಳಿಗ್ಗೆ ಕಲೆಕ್ಟರೇಟ್‌ಗೆ ಬಂದ  ನಾನು ಮೊದಲು  ಸರದಿಯಲ್ಲಿ ನಿಂತಿದ್ದರೂ ನನಗೆ ಟೋಕನ್ ನೀಡಲಾಗಿಲ್ಲವೆಂದು ಆರೋಪಿಸಿ ಉಣ್ಣಿತ್ತಾನ್ ಅಲ್ಲೇ ನೆಲದಲ್ಲಿ ಕುಳಿತು ಪ್ರತಿಭಟಿಸಿದರು. ಮೊದಲು ಬಂದು ಸರದಿಯಲ್ಲಿ ನಿಂತಿದ್ದ ನನ್ನ ಬದಲು ಎಡರಂಗ ಅಭ್ಯರ್ಥಿಗೆ ಮೊದಲ ಟೋಕನ್ ನೀಡಲು ಯತ್ನಿಸಲಾಗಿದೆ ಎಂದು ಉಣ್ಣಿತ್ತಾನ್ ದೂರಿದ್ದಾರೆ.

ಆದರೆ ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್‌ರ ಪರವಾಗಿ ಟೋಕನ್ ಪಡೆಯಲು ಇಂದು ಬೆಳಿಗ್ಗೆ ೭ ಗಂಟೆಗೆ ತಾನು ಕಲೆಕ್ಟರೇಟ್‌ಗೆ ಬಂದಿದ್ದೇನೆ. ಕಲೆಕ್ಟರೇಟ್‌ನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಲ್ಲಿ ಅದು ಸ್ಪಷ್ಟಗೊಳ್ಳಲಿ ದೆಯೆಂದು ಎಡರಂಗದ ಘಟಕ ಪಕ್ಷವಾದ ಐಎನ್‌ಎಲ್ ನೇತಾರ ಅಸೀಸ್ ಕಡಪ್ಪುರಂ ಹೇಳಿ ದ್ದಾರೆ. ಆದರೆ ಆ ವಾದ ಸರಿಯ ಲ್ಲವೆಂದು ಉಣ್ಣಿತ್ತಾನ್ ತಿಳಿಸಿದ್ದಾರೆ.  ರಾಜ್‌ಮೋಹನ್ ಉಣ್ಣಿತ್ತಾನ್ ಟೋಕನ್ ಪಡೆಯಲು ಇಂದು ಬೆಳಿಗ್ಗೆ ೯ ಗಂಟೆಗೆ ಕಲೆಕ್ಟರೇಟ್‌ಗೆ ಆಗಮಿ ಸಿದ್ದರು. ಆದರೆ  ಅಸೀಸ್ ಕಡಪ್ಪುರಂ ಅದಕ್ಕಿಂತ ಮೊದಲೇ  ಕಲೆಕ್ಟರೇಟ್‌ಗೆ ಬಂದು ಇಲ್ಲಿನ ಬೆಂಚಿನಲ್ಲಿ ಕುಳಿತಿದ್ದರು.  ಮೊದಲು ಬಂದ ವ್ಯಕ್ತಿಗೆ ಸಾಧಾರಣವಾಗಿ  ಟೋಕನ್ ನೀಡಲಾಗುತ್ತಿದೆ ಯೆಂದು ಕಲೆಕ್ಟರೇಟ್‌ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page