ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಆರೋಪಿ ಗಾಂಜಾ ಸಹಿತ ಸೆರೆ

ಕಾಸರಗೋಡು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದು ಎರಡು ಪವನ್‌ನ ಚಿನ್ನದ ಸರ ಎಗರಿಸಿದ ಪ್ರಕರಣದ ಆರೋಪಿಂiiನ್ನು  ಗಾಂಜಾ ಸಹಿತ ವಯನಾಡಿನಿಂದ ಪೊಲೀಸರು ಬಂಧಿಸಿದ್ದಾರೆ.

ಕಳನಾಡು ಕೀಯೂರು ಶಮ್ನಾಸ್ ಮಂಜಿಲ್‌ನ ಮೊಹ ಮ್ಮದ್ ಶಮ್ನಾಸ್ (೩೧) ಬಂಧಿತ  ಆರೋಪಿ.  ಮಾರ್ಚ್ ೨೦ರಂದು ಮಧ್ಯಾಹ್ನ ೧೨.೩೦ಕ್ಕೆ ಕೂಡ್ಲು ಪಾಯಿಚ್ಚಾಲ್‌ನ ಕೆ. ಸಾವಿತ್ರಿ ಎಂಬವರು ಪಾಯಿಚ್ಚಾಲ್ ಆಜಾದ್ ನಗರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬಂದು  ಅವರ ಕುತ್ತಿಗೆಯಿಂದ ಚಿನ್ನದರ ಸರ ಎಗರಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಶಮ್ನಾಸ್‌ನನ್ನು ಬಂಧಿಸಲಾಗಿದೆ. ಈತನನ್ನು ವಯನಾಡು ಪೇಟೆಯಿಂದ ಮಾರ್ಚ್ ೨೨ರಂದು  ತಿರುನೆಲ್ಲಿ ಪೊಲೀಸರು ೮ಗ್ರಾಂ ಗಾಂಚಾ ಸಹಿತ ಬಂಧಿಸಿದ್ದರು. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತ ಕಾಸರಗೋಡಿನಲ್ಲಿ ಚಿನ್ನದ ಸರ ಕಳವುಗೈದ ಆರೋಪಿಯಾಗಿ ರುವುದಾಗಿ ಸ್ಪಷ್ಟಗೊಂಡಿದೆ. ಅದರಂತೆ ಆತನನ್ನು ಬಳಿಕ ಕಾಸರಗೋಡು ಪೊಲೀಸರಿಗೆ ಹಸ್ತಂತರಿಸಲಾಗಿದೆ.

ಬೇಕಲ ಮತ್ತು ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎಂಟು ತಿಂಗಳಲ್ಲಿ ಹತ್ತರಷ್ಟು ಚಿನ್ನದ ಸರ ಎಗರಿಸಿದ ಪ್ರಕರಣ ದಲ್ಲೂ ಈತ ಆರೋಪಿಯಾಗಿ ದ್ದಾನೆ.  ಅದಕ್ಕೆ ಸಂಬಂಧಿಸಿ ಬಂಧಿತನಾದ ಈತ ಬಳಿಕ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದನು. ಪಾಯಿಚ್ಚಾಲ್‌ನಲ್ಲಿ ಚಿನ್ನದ ಸರ ಎಗರಿಸಿದ ನಾಲ್ಕು ದಿನಗಳ ಹಿಂದೆಯಷ್ಟೇ ಆತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.  ಆ ಬಳಿಕ ಮೇಲ್ಪರಂಬ ಪೊಲೀಸರು ಆತನನ್ನು ಗೂಂಡಾ ಯಾದಿಗೆ ಒಳಪಡಿಸಿ ಕಾಪಾ ಕಾನೂನುಹೇರಿ ಗಡಿಪಾರು ಮಾಡುವ ಆದೇಶವನ್ನು ಹೊರಡಿಸಿತ್ತೆಂದು  ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page