ಮಾಸಿಕುಮೇರಿ-ಕುರುಡಪದವು ರಸ್ತೆ ಕಾಮಗಾರಿ ವಿಳಂಬ: ನಾಗರಿಕರಿಂದ ಪ್ರತಿಭಟನೆಗೆ ಸಿದ್ಧತೆ
ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಮಾಸಿಕುಮೇರಿ [ಲಾಲ್ಭಾಗ್] -ಕುರುಡಪದವು ರಸ್ತೆ ಅಭಿವೃದ್ದಿಗೆ ನಾಲ್ಕೂವರೆ ಕೋಟಿ ಮಂಜೂರುಗೊAಡು ಗುತ್ತಿಗೆದಾರ ಹಾಗೂ ಅಧಿಕಾರಿಗಳು ತಲುಪಿ ಸ್ಥಳ ಪರಿಶೀಲಿಸಿ ಪೊದೆಗಳನ್ನು ತೆರವುಗೊಳಿಸಿ ಹಲವು ತಿಂಗಳು ಕಳೆದರೂ ಕಾಮಗಾರಿಗೆ ಮೀನ-ಮೇಷ ಎಣಿಸುತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಿಕರು ಹೋರಾಟಕ್ಕೆ ಸಿದ್ದತೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ರಸ್ತೆ ಹದಗೆಟ್ಟು ಹೊಂಡ ಗುಂಡಿಗಳಿAದ ಶೋಚನೀಯಾವಸ್ಥೆಗೆ ತಲುಪಿ ಬಸ್ ಸಹಿತ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆ ಉದ್ದಕ್ಕೂ ಅಲ್ಲಲ್ಲಿ ತಿರುವು, ಇಕ್ಕೆಡೆಗಳಲ್ಲಿ ಬೃಹತ್ ಹೊಂಡಗಳು ಕೂಡಿದ ರಸ್ತೆಯಲ್ಲಿ ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಹರಹಾಸದಿಂದ ಸಂಚರಿಸುತ್ತಿವೆ. ಈ ವೇಳೆ ಪದೇ ಪದೇ ಬಿಡಿಭಾಗ ಹಾನಿಗೀಡಾಗುತ್ತಿರುವುದಾಗಿ ಬಸ್ ಸಿಬ್ಬಂದಿಗಳು ದೂರಿದ್ದಾರೆ. ಊರವರ ಹಲವು ವರ್ಷಗಳ ಕನಸು ನನಸಾಗಲು ಕಾಮಗಾರಿ ಆರಂಭಗೊಳ್ಳದಿರುವುದು ತಡೆಯಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪಂಚಾಯತ್ನ 1, 2, 3 ಹಾಗೂ 19ನೇ ವಾರ್ಡ್ ಸಂಗಮಿಸುವ ಲಾಲ್ಭಾಗ್ನಿಂದ ಕುರುಡಪದವು ತನಕ ಒಟ್ಟು ಏಳು ಮುಕ್ಕಾಲು ಕಿಲೋ ಮೀಟರ್ ಉದ್ದ ಹಾಗೂ ಐದೂವರೆ ಮೀಟರ್ ಅಗಲ ರಸ್ತೆ ನಿರ್ಮಾಣಗೊಳ್ಳಲಿರುವುದಾಗಿ ಹೇಳಲಾಗುತ್ತಿದ್ದರೂ ಗುತ್ತಿಗೆದಾರ ಕಾಮಗಾರಿ ಆರಂಭಿಸಲು ಮುಂದಾಗದಿರುವುದು ನಾಗರಿಕರನ್ನು ಅಸಮಾಧಾನಕ್ಕೀಡು ಮಾಡಿದೆ. ಕೂಡಲೇ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಸಬೇಕೆಂದು ಒತ್ತಾಯಿಸಿದ್ದಾರೆ.