ಸಾಮಾಜಿಕ ಜಾಲತಾಣದಲ್ಲಿ ಮತೀಯ ದ್ವೇಷ ಹರಡಿಸುವ ರೀತಿಯ ಪ್ರಚಾರ; ಕೇಸು ದಾಖಲು
ಕಾಸರಗೋಡು: ಕಾಸರಗೋಡು ಹಳೇ ಸೂರ್ಲುವಿನ ಮದ್ರಸಾ ಅಧ್ಯಾಪಕ ಮೊಹಮ್ಮದ್ ರಿಯಾಸ್ ಮೌಲವಿಯ ಕೊಲೆ ಪ್ರಕರಣದ ಬಗ್ಗೆ ನ್ಯಾಯಾಲಯ ನೀಡಿದ ತೀರ್ಪಿಗೆ ಸಂಬಂಧಿಸಿ, ಸಾಮಾಜಿಕ ಜಾಲತಾಣ ದಲ್ಲಿ ಮತೀಯ ದ್ವೇಷ ಹರಡಿಸುವ ರೀತಿಯ ಸಂದೇಶಗಳನ್ನು ರವಾನಿಸಿದ ಬಗ್ಗೆ ಕಾಸರಗೋಡು ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಕೊಂಡಿದ್ದಾರೆ. ಮಾತ್ರವಲ್ಲ ಇಂತಹ ಸಂದೇಶವನ್ನು ಪೋಸ್ಟ್ ಮಾಡಿದ ಯೂ ಟ್ಯೂಬ್ ಐಡಿ ಮಾಲಕ ಮತ್ತು ಇಂತಹ ಸಂದೇಶ ರವಾನಿಸಿದ ವ್ಯಕ್ತಿಯ ಪತ್ತೆಗಾಗಿರುವ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ರಿಯಾಸ್ ಮೌಲವಿ ಕೊಲೆ ಪ್ರಕರಣದ ತೀರ್ಪಿನ ಬಗ್ಗೆ ಸುದ್ಧಿ ಚ್ಯಾನೆಲ್‌ವೊಂದರಲ್ಲಿ ಬಂದ ವರದಿಯನ್ನು ಬಳಸಿ ಅದರ ಕೆಳಗೆ ಮತೀಯ ದ್ವೇಷ ಕೆರಳಿಸುವ ರೀತಿಯ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು.