ತೃಶೂರು ಪಟಾಕಿ ಸಂಗ್ರಹಾಲಯದಲ್ಲಿ ಭೀಕರ ಸ್ಫೋಟ: ಮೃತರ ಸಂಖ್ಯೆ 13ಕ್ಕೇರಿಕೆ

ತೃಶೂರು: ತೃಶೂರು ಪೂರಂ ಗಾಗಿ ಕುಂಡತ್ತಿಕ್ಕಾಡ್‌ನ ಪಟಾಕಿ  ಸಂಗ್ರಹಾಲಯದಲ್ಲಿ ನಿನ್ನೆ ಉಂಟಾದ ಭೀಕರ ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡು ಹಲವರು ಗಂಭೀರ ಗಾಯಗೊಂಡ ದುರ್ಘಟನೆ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ನಡೆಸಲು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ತುರ್ತು ಸಭೆ ತೀರ್ಮಾನಿಸಿದೆ. ಮಾತ್ರವಲ್ಲ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳ ಆಶ್ರಿತರಿಗೆ ತಲಾ ೧೪ ಲಕ್ಷ ರೂ.ನಂತೆ ನಷ್ಟ ಪರಿಹಾರವನ್ನೂ ಸರಕಾರ ಘೋಷಿಸಿದೆ. ಇನ್ನೊಂದೆಡೆ ಈ ಘಟನೆ ಬಗ್ಗೆ …

ಶತಾಯುಷಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ ನಿಧನ

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ (101) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನಹೊಂದಿದರು.  ಕಳೆದ 70 ವರ್ಷಗಳಿಂದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಶ್ರೀ ವಿಶ್ವಕರ್ಮ ಫರ್ನೀಚರ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ಇವರು  ಬಡಗಿ ವೃತ್ತಿಯಲ್ಲಿ ಜನಾನುರಾಗಿಯಾಗಿದ್ದರು. ಅಲ್ಲದೆ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ  ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.  ಜೀವನದ ಸಾರ್ಥಕ 100 ವರ್ಷವನ್ನು ಪೂರೈಸಿದ …

ಕಾರಿನಲ್ಲಿ ಸಾಗಿಸುತ್ತಿದ್ದ 62 ಕಿಲೋ ಗಾಂಜಾ ಪತ್ತೆ: ಉಳಿಯತ್ತಡ್ಕ ನಿವಾಸಿ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 62 ಕಿಲೋ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಉಳಿಯತ್ತಡ್ಕ ನೇಶನಲ್ ನಗರ ನಿವಾಸಿ ಬಿಸ್ಮಿಲ್ಲಾ ಮಂಜಿಲ್‌ನ ಹನೀಫಾ (38) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರ್ನಾಕುಳಂ ಜಿಲ್ಲೆಯ ಅಂಗಮಾಲಿ ಟಿ.ಬಿ. ಜಂಕ್ಷನ್ ಬಳಿ ಎರ್ನಾಕುಳಂ ರೂರಲ್ ಜಿಲ್ಲಾ ಡಾನ್ಸಾಪ್ ನೇತೃತ್ವದ ಪೊಲೀಸರ ತಂಡ  ಈ ಕಾರ್ಯಾಚರಣೆ ನಡೆಸಿದೆ.  ಕಾರಿನ ಹಿಂದಿನ ಭಾಗದ ಆಸನದ ಒರಗುವ ಭಾಗದಲ್ಲಿ ಗುಪ್ತ ಸೆರೆ ತಯಾರಿಸಿ ಅದರೊಳಗೆ ಈ ಮಾಲಕನ್ನು ಬಚ್ಚಿಡಲಾಗಿತ್ತೆಂದು ಪೊಲೀಸರು …

ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಎರ್ನಾಕುಳಂನಿಂದ ಸೆರೆ

ಕಾಸರಗೋಡು: ತಲೆಮರೆಸಿ ಕೊಂಡಿದ್ದ ಪೋಕ್ಸೋ ಪ್ರಕರಣ ಆರೋಪಿಯನ್ನು ವಿದ್ಯಾನಗರ ಪೊಲೀಸರು ಎರ್ನಾಕುಳಂನಿಂದ ಬಂಧಿಸಿದ್ದಾರೆ. ಉಳಿಯತ್ತಡ್ಕ ಇಸ್ಸತ್ ನಗರ  ನಿವಾಸಿ ಬದ್ರುದ್ದೀನ್ (37) ಬಂಧಿತ ಆರೋಪಿ.  ಒಂದು ತಿಂಗಳ ಹಿಂದೆ ಚೆಟ್ಟುಂಗುಳಿಯಲ್ಲಿ ೧೬ರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ವಿದ್ಯಾನಗರ ಪೊಲೀಸರು  ಪೋಕ್ಸೋ ಕಾನೂನುಪ್ರಕಾರ ಪ್ರಕರಣ ದಾಖಲಿಸಿಕೊಂ ಡಿದ್ದರು. ಆ ಬಳಿಕ ಆರೋಪಿ ತಲೆಮರೆಸಿಕೊಂ ಡಿದ್ದನು.  ಆತ ಎರ್ನಾಕುಳಂನಲ್ಲಿರುವುದಾಗಿ ಬಳಿಕ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ವಿನೀಶ್ ಕುಮಾರ್‌ರ …

ನುಳ್ಳಿಪ್ಪಾಡಿ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ನಾಳೆ

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಷ್ಟಬಂಧ ಲೇಪನ ಬ್ರಹ್ಮಕಲ ಶಾಭಿಷೇಕ ನಾಳೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಭಾಗಿತ್ವದಿಂದ ಯಶಸ್ವಿಯಾಗಿದೆ. ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನ ಸಂದಣಿ ಕಂಡುಬರುತ್ತಿದೆ. ಮಕ್ಕಳು, ಮಹಿಳೆಯರ ಸಹಿತ ಜನರು ಕ್ಷೇತ್ರ ವಠಾರದಲ್ಲಿ ವಿವಿಧ ಕಾರ್ಯ ಕ್ರಮಗಳಲ್ಲಿ ಭಾಗ ವಹಿಸುತ್ತಿದ್ದಾರೆ. ಅನ್ನ ಸಂತರ್ಪಣೆಯು ಭರದಿಂದ ನಡೆಯುತ್ತಿದೆ.

ಕುಂಬಳೆಯಲ್ಲಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಓರ್ವ ಆರೋಪಿ ಚೆನ್ನೈಯಲ್ಲಿ ಸೆರೆಗೀಡಾದ ಬೆನ್ನಲ್ಲೇ ಇತರ 6 ಮಂದಿ  ಪೊಲೀಸರ ಮುಂದೆ ಶರಣು

ಕುಂಬಳೆ: ಕುಂಬಳೆ ಕೃಷ್ಣನಗರ ಸಮೀಪ ಯುವಕನನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಓರ್ವ ಆರೋಪಿ ಸೆರೆಗೀಡಾದ ಬೆನ್ನಲ್ಲೇ ಇತರ ಆರು ಮಂದಿ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಕುಂಟಂಗೇರಡ್ಕ ನಿವಾಸಿಗಳಾದ ಮುಹಮ್ಮದ್ ಹಾಶಿಂ ಯಾನೆ ಆಶಿಂ, ಅಬು ಜಾಸಿಂ ಯಾನೆ ಜಾಸಿ, ರಮೀಸ್ ರೋಷಲ್ ಫಿರೋಸ್ ಯಾನೆ ರಮೀಸ್, ಮಿನ್‌ಹಾಜ್ ಅಬ್ದುಲ್ಲ ಇ.ಕೆ ಯಾನೆ ಮಿನ್‌ಹಾಜ್, ಫಸಲ್ ರಹ್ಮಾನ್ ಯಾನೆ ಪಜಿಲು,  ಮೊಹಿಯು ದ್ದೀನ್ ನಿಹಾಲ್ ಯಾನೆ ನಿಹಾಲ್ ಎಂಬಿ ವರು ಕುಂಬಳೆ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್‌ರ …

ಮಾಜಿ ಕೌನ್ಸಿಲರ್ ನಿಧನ

ಕಾಸರಗೋಡು: ನಗರಸಭಾ ಮಾಜಿ ಕೌನ್ಸಿಲರ್, ಕಡಪ್ಪುರ ಎಸ್‌ಸಿ ಬಿಬಿಎಂ ರಸ್ತೆಯ ಕೆ.ಬಿ. ಗಂಗಾಧರನ್ (64) ನಿಧನ ಹೊಂದಿದರು. ದಿ| ಕಣ್ಣಪ್ಪ- ಸುಶೀಲ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುಕನ್ಯ, ಮಕ್ಕಳಾದ ನೀತು, ನಿಖಿಲ್, ನಖಿಲ್, ಅಳಿಯ ಪ್ರಿಜೇಶ್,  ಸಹೋದರಿ ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಿಪಿಎಂ ಕಾರ್ಯಕರ್ತನಾದ ಇವರು ಚೀರುಂಬಾ ಭಗವತೀ ಭಜನಾ ಸಮಿತಿ ಅಧ್ಯಕ್ಷ, ಪಿಲಿಕುಂಜೆ- ತಳಂಗರೆ- ಪಾಲಕುನ್ನು ಭಗವತೀ ಸೇವಾ ಸಂಘದ ಜೊತೆ ಕಾರ್ಯದರ್ಶಿ, ತೋಟತ್ತಿಲ್ ತರವಾಡು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಗಡಿನಾಡು ಕನ್ನಡ ಸಂಜೆ ಪತ್ರಿಕಾ ಸಂಪಾದಕ ಗಣೇಶ್ ಕೆ ನಿಧನ

‘ ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಪ್ರಥಮ ಕನ್ನಡ ಸಂಜೆ ಪತ್ರಿಕೆಯಾದ ಗಡಿನಾಡು ಇದರ ಸಂಪಾದಕ ಉಳಿಯತ್ತಡ್ಕ ಭಗವತೀನಗರದ ಕೋಕಿಲಾ ನಿಲಯದ ಗಣೇಶ ಕೆ (66) ನಿನ್ನೆ ನಿಧನಹೊಂದಿದರು. ಗಡಿನಾಡು ಪತ್ರಿಕೆಯ ಸಂಪಾದಕ, ಪ್ರಕಾಶಕ ಹಾಗೂ ನುರಿತ ಮುದ್ರಣಗಾರರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಕಾಸರಗೋಡು ಕರಂದಕ್ಕಾಡು ವೀರಹನುಮಾನ್ ವ್ಯಾಯಾಮ ಶಾಲೆಯ ಸ್ಥಾಪಕ ಸದಸ್ಯರೂ ಆಗಿದ್ದರು. ನಿನ್ನೆ ಮನೆಯಲ್ಲಿ ಇವರಿಗೆ ಎದೆನೋವು ಕಾಣಿಸಿಕೊಂಡು ಅಲ್ಲೇ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾ ಯಿತಾದರೂ ಅದು ಫಲಕಾರಿಯಾಗದೆ …

ಭಾಸ್ಕರ ಕುಂಬಳೆ ಬಲಿದಾನ ದಿನಾಚರಣೆ ಇಂದು

ಕುಂಬಳೆ: ಡಿವೈಎಫ್‌ಐ  ನೇತಾರನಾಗಿದ್ದ ಭಾಸ್ಕರ ಕುಂಬಳೆಯವರ  ಬಲಿದಾನ ದಿನಾಚರಣೆಯಂಗವಾಗಿ ಇಂದು ಸಂಜೆ 4 ಗಂಟೆಗೆ ಕುಂಬಳೆಯಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ . ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ. ಸ್ವರಾಜ್ ಉದ್ಘಾಟಿಸುವರು. ಇಂದು ಬೆಳಿಗ್ಗೆ ಶೇಡಿಕಾವಿನಲ್ಲಿರುವ ಸ್ಮೃತಿ ಮಂಟಪದಲ್ಲಿ  ಪುಷ್ಪಾರ್ಚನೆ ನಡೆಸಲಾಯಿತು. ಶಾಸಕ ಸಿ.ಎಚ್. ಕುಂಞಂಬು, ನೇತಾರರಾದ ವಿ.ವಿ. ರಮೇಶ್, ರಾಜೇಶ್ ವಲಾಟ್, ರಘುದೇವ್ ಮಾಸ್ತರ್, ಕೆ.ಆರ್. ಜಯಾನಂದ, ಸಿ.ಎ.ಸುಬೈರ್, ಶಾಲು ಮ್ಯಾಥ್ಯು ಮೊದಲಾದವರು ಭಾಗವಹಿಸಿದರು.